– ಮತದಾರರಿಗೆ ಬೆಳ್ಳಿ ನಾಣ್ಯ ಗಿಫ್ಟ್
ಬೆಂಗಳೂರು: ಬಿಬಿಎಂಪಿ ನೌಕರ ಮಾಯಣ್ಣ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ. ದಾಳಿಯಲ್ಲಿ ಭಾರೀ ಪ್ರಮಾಣದ ದಾಖಲೆಗಳು ದೊರೆತಿದ್ದು, ಇವರ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿದೆ.
ಮಾಯಣ್ಣ ಅವರು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬಿಬಿಎಂಪಿ ಎಂಪ್ಲೈಯ್ ಅಸೋಸಿಯೇಷನ್ ಮೂಲಕ ಹಾಗೂ ಸಾಹಿತ್ಯ ಪರಿಷತ್‍ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಅವರ ಹೆಸರು ಬಿಬಿಎಂಪಿ ನೌಕರಿಗಿಂತ ಹೆಚ್ಚಾಗಿ ಬಿಬಿಎಂಪಿ ಅಕ್ರಮಗಳಲ್ಲೇ ಕೇಳಿ ಬರುತ್ತಿತ್ತು.
Advertisement
Advertisement
ಒಂದೇ ಪೋಸ್ಟ್: ಬಿಬಿಎಂಪಿ ಇತಿಹಾಸದಲ್ಲೇ 11 ವರ್ಷಗಳ ಕಾಲ ಒಂದೇ ಪೋಸ್ಟ್ ನಲ್ಲಿ ದ್ದ ಏಕೈಕ ವ್ಯಕ್ತಿ ಮಾಯಣ್ಣ. 2009 ರಿಂದ 11 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾಕಷ್ಟು ಬಾರಿ ಬಿಬಿಎಂಪಿಯ ಬೇರೆ ವಿಭಾಗಗಳಿಗೆ ವರ್ಗಾವಣೆಗಳಾದ್ದರೂ, ಮೇಲಾಧಿಕಾರಿಗಳಿಂದ ಒತ್ತಡ ತಂದು ಮತ್ತದೇ ಪೋಸ್ಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಐದು ವರ್ಷದ ಹಿಂದೆ ಸಸ್ಪೆಂಡ್ ಆಗಿದ್ದರು. ಸಸ್ಪೆಂಡ್ ರಿವೋಕ್ ಮಾಡಿಸಿಕೊಂಡು ಮತ್ತೆ ಇದೇ ಹುದ್ದೆಯಲ್ಲೇ ಮುಂದುವರೆದಿದ್ದರು. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ
Advertisement
ಕೆಲಸಕ್ಕಿಂತ ಬೇರೆ ಬೇರೆ ಡೀಲ್‍ಗಳಲ್ಲೇ ಹೆಚ್ಚು ಬ್ಯುಸಿಯಾಗಿರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 2012-13 ರಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು. ಜೊತೆಗೆ 26 ಕೋಟಿ ರೂಪಾಯಿ ಹೆಚ್ಚಿನ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದ ಎನ್ನುವುದರ ಬಗ್ಗೆಯೂ ಆರೋಪ ಇವರ ಮೇಲಿದೆ.
Advertisement
ಬಿಬಿಎಂಪಿ ಲೆಕ್ಕಪರಿಶೋಧಕ ವರದಿಯಲ್ಲಿ ಮಾಯಣ್ಣ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಮಾಯಣ್ಣ ಅವರ ಸ್ವಂತ ಅಕೌಂಟ್‍ನಿಂದ ಹಣ ವಸೂಲಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಎಸಿಬಿ ಬೇಟೆಗೆ ಬಿದ್ದ ಮಾಯಣ್ಣ ಅವರು ಒಟ್ಟಾರೆಯಾಗಿ 135 ಕೋಟಿ ರೂ.ಗಳನ್ನು ಸರ್ಕಾರಕ್ಕೆ ನೀಡಬೇಕಿದೆ.
ಮಾಯಣ್ಣ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸೂಚನೆ ಅನ್ವಯ ಮಾಯಣ್ಣರಿಂದ 135 ಕೋಟಿ ವಸೂಲಿ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆಗೆ ಆದೇಶಿಸಲಾಗಿದೆ. ಆದರೆ, ಸರ್ಕಾರದ ಆದೇಶಕ್ಕೆ ಕ್ಯಾರೆ ಅನ್ನದೆ ಮಾಯಣ್ಣ ತಮ್ಮ ಹುದ್ದೆಯಲ್ಲಿ ಮುಂದುವರೆದಿದ್ದರು. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ
ಬೆಳ್ಳಿ ನಾಣ್ಯ ಗಿಫ್ಟ್: ಮೊನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಗೆ ಮಾಯಣ್ಣ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಮತ ನೀಡಲು ಸದಸ್ಯರಿಗೆ ಬೆಳ್ಳಿ ಕಾಯಿನ್ ಜೊತೆಗೆ ಸಾಕಷ್ಟು ಹಣಗಳ ಆಮಿಷ ಒಡ್ಡಿದ್ದರು. ಆದರೂ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಪಡೆದು ಸೋಲನ್ನು ಒಪ್ಪಿಕೊಂಡಿದ್ದರು.
ಈ ಹಿಂದೆ ಬೆಂಗಳೂರು ನಗರ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಮಾಯಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಬಿಎಂಪಿಯಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮ ಮಾಡಿ ಸಾಕಷ್ಟು ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಆರೋಪಗಳೂ ಈಗ ಕೇಳಿ ಬರುತ್ತಿವೆ.
ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ಎಸಿಬಿ ಇಂದು ದಾಳಿ ನಡೆಸಿದ್ದು, ಮಾಯಣ್ಣನ ಅಕ್ರಮ ಆಸ್ತಿಯ ಬಗ್ಗೆ ಹಲವು ದಾಖಲೆಗಳು ಲಭ್ಯವಾಗುತ್ತಿದೆ. ಮಾಯಣ್ಣ ಪತ್ನಿ ಹೆಸರಲ್ಲಿ ಬೆಲೆಬಾಳೋ ಬೆನ್ಜ್ ಹಾಗೂ ಇನ್ನೋವಾ ಕಾರುಗಳಿದೆ. ಮಾಯಣ್ಣ ಕುಣಿಗಲ್, ಮಾಗಡಿ, ಬೆಂಗಳೂರು ಸೇರಿದಂತೆ ಹತ್ತಾರು ಕಡೆ ಇಪ್ಪತ್ತಕ್ಕೂ ಹೆಚ್ಚು ಆಸ್ತಿ-ಪಾಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ತನ್ನ ಹೆಂಡತಿ- ಮಕ್ಕಳ ಹೆಸರಲ್ಲೇ ಕೋಟಿ ಕೋಟಿ ರೂ. ಬೆಲೆ ಬಾಳುವ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಈ ಎಲ್ಲಾ ದಾಖಲೆಗಳನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಶೇಖರಿಸಿ ಇಟ್ಟಿದ್ದರು.
ಎಸಿಬಿ ದಾಳಿಯಾದ ಮೇಲಾದರೂ 135 ಕೋಟಿ ರೂ. ನಗರಾಭಿವೃದ್ಧಿ ಇಲಾಖೆ ವಸೂಲಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.