ಸಿಯೋಲ್: ಹಬ್ಬದ ಸಂಭ್ರಮಕ್ಕೆಂದು ಮಾರ್ಕೆಟ್‍ನಲ್ಲಿ (Market) ಸೇರಿದ್ದ 100ಕ್ಕೂ ಹೆಚ್ಚು ಮಂದಿ ಏಕಾಏಕಿ ಹೃದಯ ಸ್ತಂಭನದಿಂದ (Cardiac Arrest) ಕುಸಿದು ಬಿದ್ದ ಘಟನೆ ದಕ್ಷಿಣ ಕೊರಿಯಾದ (South Korea) ರಾಜಧಾನಿ ಸಿಯೋಲ್‍ನಲ್ಲಿ (Seoul) ಇಂದು ರಾತ್ರಿ ನಡೆದಿದೆ.
Advertisement
ದಕ್ಷಿಣ ಕೊರಿಯಾದಲ್ಲಿ ಹ್ಯಾಲೋವೀನ್ ಹಬ್ಬದ (Halloween festivities) ಸಂಭ್ರಮದ ಖರೀದಿಗಾಗಿ ಜನ ಸಿಯೋಲ್‍ನ ಮಾರುಕಟ್ಟೆಯೊಂದರಲ್ಲಿ ಸೇರಿದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುಕಟ್ಟೆಯಲ್ಲಿದ್ದರು. ಈ ವೇಳೆ ನೂರಾರು ಮಂದಿ ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಿರುವ ವೀಡಿಯೋ ಸ್ಥಳೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್
Advertisement
#BREAKING: #SouthKorea‘s fire department said 81 people have breathing problems after the #stampede at Itaewon in #Seoul, South Korea Saturday night when over 100 thousand revellers crammed into the place for #Halloween celebrations.#SeoulStampede pic.twitter.com/QwyWcYTj43
— Media Warrior (@MediaWarriorY) October 29, 2022
Advertisement
ಕಳೆದರಡು ವರ್ಷಗಳಿಂದ ಕೊರೊನಾದಿಂದಾಗಿ (Corona) ದಕ್ಷಿಣ ಕೊರಿಯಾದಲ್ಲಿ ಸ್ಥಗಿತಗೊಂಡಿದ್ದ ಹ್ಯಾಲೋವೀನ್ ಹಬ್ಬವನ್ನು ಈ ವರ್ಷ ಆಚರಿಸಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಜನ ಹಬ್ಬದ ಖರೀದಿಗಾಗಿ ಮಾರ್ಕೆಟ್‍ನಲ್ಲಿ ಸೇರಿದ್ದಾರೆ. ಈ ವೇಳೆ ಏಕಾಏಕಿ ಹಲವು ಮಂದಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದವರಿಗೆ ಹೃದಯ ಸ್ತಂಭನವಾಗಿದ್ದು, 81 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ
Advertisement
Dozens of people reportedly suffering mysterious cardiac arrest symptoms during Halloween celebrations in Seoul, South Korea. pic.twitter.com/qCCgzxeZzW
— Frida Ghitis (@FridaGhitis) October 29, 2022
ಹೃದಯ ಸ್ತಂಭನಕ್ಕೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.