ದುಬೈ: ಏಷ್ಯಾಕಪ್ (Asia Cup) ಪಂದ್ಯಗಳಲ್ಲಿ ಸಿಕ್ಸ್ ಮೇಲೆ ಸಿಕ್ಸ್ (Six) ಸಿಡಿಸುತ್ತಿರುವ ಅಭಿಷೇಕ್ ಶರ್ಮಾ (Abhishek Sharma) ಇತಿಹಾಸ ಸೃಷ್ಟಿಸಿದ್ದಾರೆ.
ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಪಂದ್ಯದಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ಒಂದು ಏಷ್ಯಾಕಪ್ ಆವೃತ್ತಿಯಲ್ಲಿ (ಸಿಂಗಲ್ ಎಡಿಷನ್) ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಶ್ರೀಲಂಕಾದ ಆರಂಭಿಕ ಆಟಗಾರ ಸನತ್ ಜಯಸೂರ್ಯ ಹೆಸರಿನಲ್ಲಿ ಈ ದಾಖಲೆ ಇತ್ತು. ಪಾಕಿಸ್ತಾನದಲ್ಲಿ ನಡೆದ 2008 ರ ಏಷ್ಯಾಕಪ್ ಟೂರ್ನಿಯಲ್ಲಿ 5 ಪಂದ್ಯವಾಡಿ 14 ಸಿಕ್ಸ್ ಹೊಡೆದಿದ್ದರು.
And just like that, Abhishek Sharma reaches his fifty 🤯
Watch #INDvBAN LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 pic.twitter.com/fP1RpHC0Eu
— Sony Sports Network (@SonySportsNetwk) September 24, 2025
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 5 ಸಿಕ್ಸ್ ಸಿಡಿಸಿ ಜಯಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿದ್ದಾರೆ. ಇಲ್ಲಿಯವರೆಗೆ ಶರ್ಮಾ5 ಪಂದ್ಯಗಳಿಂದ ಒಟ್ಟು 17 ಸಿಕ್ಸ್ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್ ಪ್ರವೇಶಿಸಿದ ಭಾರತ
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ (Rohit Sharama) 2018ರ ಆವೃತ್ತಿಯಲ್ಲಿ 13 ಸಿಕ್ಸರ್ ಸಿಡಿಸಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ 2010ರ ಟೂರ್ನಿಯಲ್ಲಿ 12 ಸಿಕ್ಸರ್ ಸಿಡಿಸಿ 4ನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ರಹಮನುಲ್ಲಾ ಗುರ್ಬಾಜ್ , 2022ರ ಟಿ20 ಮಾದರಿಯ ಏಷ್ಯಾಕಪ್‌ನಲ್ಲಿ ಓಪನರ್ ಆಗಿ 12 ಸಿಕ್ಸರ್ ಸಿಡಿಸಿ ಅಫ್ರಿದಿ ಜೊತೆ 4ನೇ ಪಡೆದಿದ್ದಾರೆ.
ಇಂದಿನ ಪಂದ್ಯದಲ್ಲಿ ಅಭಿಶೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸ್ ನೆರವಿನಿಂದ 75 ರನ್ ಚಚ್ಚಿದ್ದಾರೆ. ಈ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.
Abhishek Sharma goes beserk in Dubai 💥
Watch #INDvBAN LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 pic.twitter.com/cCsxAUcAWc
— Sony Sports Network (@SonySportsNetwk) September 24, 2025
ಯಾವ ತಂಡದ ವಿರುದ್ಧ ಅಭಿಷೇಕ್ ಶರ್ಮಾ ಎಷ್ಟು ಸಿಕ್ಸ್?
ಯುಎಇ – 3
ಪಾಕಿಸ್ತಾನ – 2
ಒಮನ್ – 2
ಪಾಕಿಸ್ತಾನ – 5
ಬಾಂಗ್ಲಾದೇಶ – 5