ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದ ತನಿಖೆ ವೇಳೆ ಹಲವು ಸ್ಫೋಟಕ ವಿಷಯಗಳು ಬಹಿರಂಗಗೊಂಡಿವೆ. ಬಿಷ್ಣೋಯ್ ಗ್ಯಾಂಗ್ (Bishnoi Gang) ಟೈಗರ್ ಶ್ರಾಫ್ ಮೇಲಲ್ಲ, ಅಸಲಿಗೆ ಆಮಿರ್ ಖಾನ್ (Aamir Khan) ಮೇಲೆ ಗುಂಡಿನ ದಾಳಿ ನಡೆಸಲು ಪ್ಲ್ಯಾನ್ ಮಾಡಿದ್ದರು ಎಂಬ ಸತ್ಯ ಹೊರಬಿದ್ದಿದೆ.
ಮುಂಬೈ ಪೊಲೀಸರ ತನಿಖೆಯ ಪ್ರಕಾರ, ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸುವ ಮೊದಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆಮಿರ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ಹೂಡಿದ್ದರು. ಅದಕ್ಕಾಗಿ ಆಮಿರ್ ಖಾನ್ ಅವರ ಬಾಂದ್ರಾ ನಿವಾಸದ ಸುತ್ತ ಸುಮಾರು ಒಂದು ತಿಂಗಳ ಕಾಲ ಕಳೆದಿದ್ದು, ಕೊನೆಗೆ ಆಮಿರ್ ಖಾನ್ ಮನೆಯಿಂದ ಹೊರಬರದೇ ಇದ್ದಾಗ ಪ್ಲ್ಯಾನ್ ಫ್ಲಾಪ್ ಆಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಫೈರಿಂಗ್ ಕೇಸ್ | ಸಿಗ್ನಲ್, ಝಂಗಿ ಆ್ಯಪ್ ಬಳಸಿ ಸಂಚು, ಪೊಲೀಸರಿಂದ ತನಿಖೆ ಚುರುಕು
ಇನ್ನೂ ಪೊಲೀಸರ ಆರಂಭಿಕ ವಿಚಾರಣೆಯಲ್ಲಿ ಆರೋಪಿಗಳು, ತಮ್ಮ ಪ್ರಾಥಮಿಕ ಮತ್ತು ಮೂಲ ಗುರಿ ಸಲ್ಮಾನ್ ಖಾನ್ (Salman Khan) ಅವರೇ ಎಂದು ತಿಳಿಸಿದ್ದರು. ಜೊತೆಗೆ ಸಲ್ಮಾನ್ ಖಾನ್ ಅವರ ನಿವಾಸವಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಸುತ್ತಲೂ ಪರಿಶೀಲನೆ ನಡೆಸಿದ್ದರು. ಆದರೆ ಅವನ ಮನೆಗೆ ನಿಯೋಜಿಸಲಾಗಿದ್ದ ಬಿಗಿ ಭದ್ರತೆಯನ್ನು ಗಮನಿಸಿ ಪ್ಲ್ಯಾನ್ ಕೈಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ವತಃ ಆರೋಪಿಗಳೇ ಈ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದು, ಸಲ್ಮಾನ್ ಖಾನ್ ಪ್ಲ್ಯಾನ್ ಫ್ಲಾಪ್ ಆದ ಬಳಿಕ ಆಮಿರ್ ಖಾನ್, ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳ ಮೇಲೆ ನಿಗಾ ಇರಿಸಿದ್ದೆವು ಎಂದಿದ್ದಾರೆ.
ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಈವರೆಗೆ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣದಿಂದ 11 ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್; ಮತ್ತೆ ಇಬ್ಬರು ಅರೆಸ್ಟ್, ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
