ನವದೆಹಲಿ: ಎಲ್ಲದಕ್ಕೂ ಆಧಾರ್ ಕಡ್ಡಾಯಗೊಳಿಸಿರುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಾಗುತ್ತದೆ ಎಂದು ರಾಜ್ಯಸಭಾ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆಧಾರ್ ಕಡ್ಡಾಯಗೊಳಿಸಿರುವುದರಿಂದ ದೇಶದ ಭದ್ರತೆಗೆ ಯಾವ ರೀತಿಯಾಗಿ ಅಪಾಯವಿದೆ ಎಂದು ವಿವರಿಸಿ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ,
ವಿವಿಧ ಸೇವೆಗಳನ್ನು ಹಾಗೂ ಸಮಾಜ ಕಲ್ಯಾಣ ಯೋಜನೆಯನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವ ವಿಷಯವು ಸವಾಲು ಆಗುವುದರಿಂದ ಸುಪ್ರೀಂ ಕೊರ್ಟ್ ರದ್ದು ಪಡಿಸಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು
ಮೊಬೈಲ್ ಫೋನ್ ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿದೆ. ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಗೊಳಿಸುವುದನ್ನು ಪ್ರಶ್ನಿಸಿರುವ ಕೋರ್ಟ್ ಎಲ್ಲಾ ಅರ್ಜಿಗಳನ್ನು ಸಂವಿಧಾನ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ
ಈ ಹಿಂದೆಯೂ ಸುಬ್ರಮಣಿಯನ್ ಸ್ವಾಮಿಯವರು ಆಧಾರ್ ವಿರುದ್ಧ ಮಾತನಾಡಿದ್ದರು. ಆಧಾರ್ ವಿವರಗಳು ವಿದೇಶಿ ಗುಪ್ತಚರ ಸಂಸ್ಥೆಗಳ ಪಾಲಾಗುವ ಅಪಾಯವಿದೆ ಎಂದು ವಾದಿಸಿದ್ದರು.
I am writing a letter soon to PM detailing how compulsory Aadhar is a threat to our national security. SC will I am sure strike it down.
— Subramanian Swamy (@Swamy39) October 31, 2017