ಅಲ್ಲು ಅರ್ಜುನ್ (Allu Arjun) ‘ಪುಷ್ಪ 2’ (Pushpa 2) ಸಕ್ಸಸ್ ಬಳಿಕ ‘ಜವಾನ್’ ಡೈರೆಕ್ಟರ್ ಅಟ್ಲಿ ಜೊತೆ ಕೈಜೋಡಿಸಿದ್ದಾರೆ. ಇಬ್ಬರ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಅಧಿಕೃತವಾಗಿ ಘೋಷಣೆ ಕೂಡ ಆಗಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಸಮಂತಾ (Samantha) ಜೊತೆಯಾಗ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:800 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ ಅಲ್ಲು ಅರ್ಜುನ್, ಅಟ್ಲಿ ಸಿನಿಮಾ
ಅಲ್ಲು ಅರ್ಜುನ್‌ಗಾಗಿ ಭಿನ್ನವಾಗಿರೋ ಕಥೆಯನ್ನೇ ಅಟ್ಲಿ ಹೆಣೆದಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದ ಮೂಲಕ ಬರಲು ನಟ ರೆಡಿಯಾಗಿದ್ದಾರೆ. 800 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಹೀಗಿರುವಾಗ ಈ ಚಿತ್ರಕ್ಕೆ ಸಮಂತಾ ಹೀರೋಯಿನ್ ಎಂದು ಗುಸು ಗುಸು ಶುರುವಾಗಿದೆ. ಅದಕ್ಕೆ ಪೂರಕವೆಂಬಂತೆ ಚೆನ್ನೈನಲ್ಲಿರುವ ಡೈರೆಕ್ಟರ್ ಅಟ್ಲಿ ಆಫೀಸ್‌ಗೆ ಸಮಂತಾ ಭೇಟಿ ಕೊಟ್ಟಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಅಲ್ಲು ಅರ್ಜುನ್‌ಗೆ ಸಮಂತಾ ನಾಯಕಿ ಎಂಬ ವಿಚಾರ ಫ್ಯಾನ್ಸ್‌ಗೆ ದಟ್ಟವಾಗಿದೆ.ಇದನ್ನೂ ಓದಿ:ಹಳ್ಳಿ ಹುಡುಗಿ ಗೆಟಪ್‌ನಲ್ಲಿ ‘ಕಿಸ್’ ನಟಿ- ಅಖಿಲ್ ಅಕ್ಕಿನೇನಿಗೆ ಶ್ರೀಲೀಲಾ ಜೋಡಿ
ಈ ಹಿಂದೆ ಅಲ್ಲು ಅರ್ಜುನ್ ಜೊತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಸಮಂತಾ ನಟಿಸಿದ್ದಾರೆ. ಡೈರೆಕ್ಟರ್ ಅಟ್ಲಿ ಜೊತೆಗೆ ಕೆಲಸ ಮಾಡಿ ಕೂಡ ಅವರು ಪಳಗಿದ್ದಾರೆ. ಹೀಗಾಗಿ ಈ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿಲ್ಲ. ತಂಡ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ಬಾಲಿವುಡ್ ಪ್ರಾಜೆಕ್ಟ್ ಜೊತೆ ಕೆಲ ಆ್ಯಡ್ ಶೂಟ್‌ಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.