ಇಂಡೋನೇಷ್ಯಾದಲ್ಲಿ ಟ್ರೆಡ್‌ಮಿಲ್‌ನಿಂದ ಜಾರಿ ಬಿದ್ದ 22ರ ಯುವತಿ ಜಿಮ್‌ನ ಕಿಟಕಿಯಿಂದ ಹೊರಬಿದ್ದು ಸಾವು

Public TV
1 Min Read
Woman Stumbles Off Treadmill Falls Out Of Gym Window In Indonesia

ಜಕಾರ್ತ: ಇಂಡೋನೇಷ್ಯಾದಲ್ಲಿ (Indonesia) ಟ್ರೆಡ್‌ಮಿಲ್‌ನಿಂದ (Treadmill) ಜಾರಿ ಬಿದ್ದ 22 ವರ್ಷದ ಯುವತಿ ಜಿಮ್‌ನ ಕಿಟಕಿಯಿಂದ ಹೊರ ಬಿದ್ದು ಸಾವಿಗೀಡಾಗಿದ್ದಾಳೆ.

ಇಲ್ಲಿನ ಪಶ್ಚಿಮ ಕಾಲಿಮಂಟನ್‌ನ ಪೊಂಟಿಯಾನಕ್‌ನಲ್ಲಿರುವ ಜಿಮ್‌ನ ಮೂರನೇ ಮಹಡಿಯ ಕಿಟಕಿಯಿಂದ ಯುವತಿ ಬಿದ್ದು ಮೃತಪಟ್ಟಿದ್ದಾಳೆ. ಬೆಚ್ಚಿಬೀಳಿಸುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: T20 ವಿಶ್ವಕಪ್‌ ಸೆಮಿಸ್‌ಗೆ ಅಫ್ಘಾನ್‌ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ

GYM 2

ಯುವತಿ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಳು. ಈ ವೇಳೆ ಟವೆಲ್‌ನಿಂದ ತನ್ನ ಮುಖ ಒರೆಸಲು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಈ ವೇಳೆ ಸಮತೋಲನ ಕಳೆದುಕೊಂಡು ಹಿಂದಕ್ಕೆ ಸರಿದು, ತೆರೆದ ಕಿಟಕಿಯಿಂದ ಹೊರಬಿದ್ದು ಸಾವಿಗೀಡಾಗಿದ್ದಾಳೆ.

ಕೆಳಗೆ ಬಿದ್ದ ಯುವತಿ ತಲೆಗೆ ಗಂಭೀರ ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಯುವತಿ ಉಸಿರು ಚೆಲ್ಲಿದ್ದಳು. ಮರಣೋತ್ತರ ಪರೀಕ್ಷೆ ವೇಳೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ಸೀಳು ಸಹ ಕಂಡುಬಂದಿತ್ತು. ಇದನ್ನೂ ಓದಿ: ಜಪಾನ್‌ ಅನ್ನು ಕಾಡುತ್ತಿದೆ ಮನುಷ್ಯನ ಮಾಂಸ ತಿನ್ನುವ ವೈರಸ್‌ – ಭಾರತಕ್ಕೂ ಇದೆಯಾ ಆತಂಕ?

ಟ್ರೆಡ್‌ಮಿಲ್ ಮತ್ತು ಕಿಟಕಿಯ ನಡುವಿನ ಅಂತರ ಕೇವಲ 60 ಸೆಂ.ಮೀ ಎಂದು ತನಿಖೆಯಿಂದ ತಿಳಿದುಬಂದಿದೆ. ಟ್ರೆಡ್‌ಮಿಲ್‌ನ ಸ್ಥಾನವು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಪೊಲೀಸರು ಗಮನಿಸಿದ್ದಾರೆ.

Share This Article