ದುಬೈನಲ್ಲಿ ಏರ್‌ಪೋರ್ಟ್ ಅಧಿಕಾರಿಯಾಗಿದ್ದ ಮಂಗಳೂರು ಯುವತಿ ಅಪಘಾತದಲ್ಲಿ ಸಾವು

Public TV
1 Min Read
VIDHISHA

ಮಂಗಳೂರು: ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಉಳ್ಳಾಲ ಮೂಲದ ಯುವತಿ ಸಾವನ್ನಪ್ಪಿದ್ದಾರೆ.

ಉಳ್ಳಾಲ ತಾಲೂಕಿನ ಕೋಟೆಕಾರ್ ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ವಿಧಿವಶರಾದ ದುರ್ದೈವಿ. ಇವರು ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಬಿಜೆಪಿ ಮುಖಂಡೆ ರಾಜೀವಿ ಹಾಗೂ ವಿಠಲ ಕುಲಾಲ್ ದಂಪತಿಯ ಏಕೈಕ ಪುತ್ರಿ. ಇದನ್ನೂ ಓದಿ: ಲೋ ಬಿಪಿಯಿಂದ ಪತ್ನಿ ಸಾವೆಂದ ದರ್ಶನ್-‌ ಪತಿಯಿಂದ್ಲೇ ಕೊಲೆ ಅಂತಾ ಪೋಷಕರ ಆರೋಪ

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ಬಳಿಕ 2019 ರಿಂದ ದುಬೈಗೆ ತೆರಳಿ ಅಲ್ಲಿನ ಏರ್‌ಪೋರ್ಟ್ ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಪ್ರತಿದಿನ ಕಂಪನಿಯ ಕ್ಯಾಬ್ ನಲ್ಲೇ ಸಂಚರಿಸುತ್ತಿದ್ದ ವಿದಿಶಾ ಕ್ಯಾಬ್ ತಪ್ಪಿದ ಹಿನ್ನೆಲೆಯಲ್ಲಿ ತನ್ನ ಕಾರಿನಲ್ಲೇ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ .ಗಂಭೀರವಾಗಿ ಗಾಯಗೊಂಡ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Share This Article