ಆನೇಕಲ್: ವಿದೇಶದಲ್ಲಿ ಓದು ಮುಗಿಸಿ ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ(Hoskote) ಸಮೀಪದ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೈಯೇಶ್ (28) ಆತ್ಮಹತ್ಯೆಗೆ ಶರಣಾದ ಯುವಕ. ಇತ್ತೀಚೆಗಷ್ಟೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ ಬೈಯೇಶ್ ಮನೆಯಲ್ಲಿದ್ದ ತಂದೆಯ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾದ ಸೈನಿಕರಿಗೆ ಸೆಲ್ಯೂಟ್: ಮೋದಿ
ಇಂದು ಮುಂಜಾನೆ ಮನೆಯವರು ಕುಟುಂಬಸ್ಥರೊಂದಿಗೆ ತಿರುಪತಿಗೆ ತೆರಳಿದ್ದರು. ಈ ವೇಳೆ ಬೈಯೇಶ್ ನನಗೆ ಕೆಲಸ ಇದೆ ಎಂದು ಹೇಳಿ ಮನೆಯಲ್ಲೇ ಉಳಿದುಕೊಂಡಿದ್ದ. ಬೆಳಗ್ಗೆ 7 ಗಂಟೆ ಸುಮಾರಿಗೆ ಬೈಯೇಶ್ ತೋಟದ ಮನೆಗೆ ತೆರಳಿ ತಂದೆಯ ಸಿಂಗಲ್ ಬ್ಯಾರಲ್ ಗನ್‌ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಭಾರತ, ಪಾಕ್ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್
ತೋಟದ ಮನೆಯಿಂದ ಜೋರಾದ ಗುಂಡಿನ ಶಬ್ದ ಬರ್ತಿದ್ದಂತೆ ಕೆಲಸದವರು ಹಾಗೂ ಅಕ್ಕಪಕ್ಕದವರೆಲ್ಲಾ ಓಡಿಬಂದಾಗ ಗುಂಡು ಬೈಯೇಶ್ ತಲೆಯನ್ನು ಸೀಳಿತ್ತು. ಬೈಯೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಹಾಗೂ ಬೈಯೇಶ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬ ಮಾತನಾಡಿ, ತಿರುಮಲಶೆಟ್ಟಿಹಳ್ಳಿ ಬಳಿ ಇಂದು ಈ ಘಟನೆ ನಡೆದಿದೆ. ಮೃತ ಬೈಯೇಶ್ ಯುವಕ ಲೈಸೆನ್ಸ್ ಗನ್‌ನಿಂದ ಸೂಸೈಡ್ ಮಾಡಿಕೊಂಡಿದ್ದಾನೆ. ಶೂಟ್ ಮಾಡಿಕೊಂಡು ಸೂಸೈಡ್ ಮಾಡ್ಕೊಂಡಿದ್ದಾರಾ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಇತ್ತೀಚೆಗೆ ಅವರ ತಂದೆ ಕೂಡ ಯುವಕನಿಗೆ 30 ಲಕ್ಷ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹಣದ ವಿಚಾರವಾಗಿ ನಷ್ಟ ಆಗಿದ್ದರಿಂದ ಶೂಟ್ ಮಾಡಿಕೊಂಡಿರುವ ಶಂಕೆ ಇದೆ. ಅವರ ತಂದೆ ನೀಡಿರುವ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದೆ ಪಾಪಿ ಪಾಕ್ ಕೈವಾಡಕ್ಕೆ ಸಾಕ್ಷ್ಯ – ಅಮೆರಿಕದಿಂದ 3 ಲಕ್ಷಕ್ಕೆ ಸ್ಯಾಟ್‌ಲೈಟ್ ಚಿತ್ರ ಪಡೆದಿದ್ದ ಉಗ್ರರು?
ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ(Tirumala Shetty Halli Police) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆಯ ಕುರಿತು ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.