ಶಿವಮೊಗ್ಗ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ (KSRTC Bus) ಚಕ್ರ ಕಳಚಿ ಬಿದ್ದ ಘಟನೆ ಆಗುಂಬೆಯಲ್ಲಿ (Agumbe) ನಡೆದಿದೆ. ಚಕ್ರ ಕಳಚುತ್ತಿದ್ದಂತೆ ಎಚ್ಚೆತ್ತ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬಸ್ ಉಡುಪಿಯಿಂದ – ಶಿವಮೊಗ್ಗಕ್ಕೆ (Shivamogga) ಬರುತ್ತಿತ್ತು. ಉಡುಪಿಯಿಂದ ಘಾಟ್ ಹತ್ತಿ, ಆಗುಂಬೆ ಬಳಿ ಬಂದಾಗ ಬಸ್‌ನ ಚಕ್ರ ಕಳಚಿದೆ. ಫೋಟೋದಲ್ಲಿ ಚಕ್ರ ಕಳಚಿ ಬಿದ್ದ ಜಾಗದಿಂದ ಸುಮಾರು 50 ಮೀಟರ್ ದೂರದಲ್ಲಿ ಬಸ್ ನಿಂತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ; 20 ಮಂದಿಗೆ ಗಾಯ, ಓರ್ವ ಸಾವು
ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅಕಸ್ಮಾತ್ ಘಾಟಿಯಲ್ಲಿದ್ದಾಗ ಅಥವಾ ವೇಗವಾಗಿದ್ದಾಗ ಈ ಅವಘಡ ಆಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ: ಮುರಿದುಬಿದ್ದ ತಡೆ ಬೇಲಿ, ಮರಗಳು – ಚಾಲಕ, ನಿರ್ವಾಹಕ ಪಾರು

