ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ; ಕುಮಟಾ-ಸಿದ್ದಾಪುರ ಮಾರ್ಗದಲ್ಲಿ ಪ್ರಯಾಣಿಕರ ಪರದಾಟ

Public TV
1 Min Read
dodmane ghat tree fell

ಕಾರವಾರ: ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಟ್ಟದಲ್ಲಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡ ಘಟನೆ ಗುರುವಾರ ನಡೆದಿದೆ.

ಜಿಲ್ಲೆಯಲ್ಲಿ ಗಾಳಿ, ಮಳೆ ಜೋರಾದ ಬೆನ್ಮಲ್ಲೇ ಸಿದ್ದಾಪುರ ಬಡಾಳ ಕುಮಟಾ ಮಾರ್ಗದ ದೊಡ್ಮನೆ ಘಟ್ಟ ಪ್ರದೇಶದ ಬಳಿ ರಾಜ್ಯ ಹೆದ್ದಾರಿಗೆ ಬೃಹದಾಕಾರದ ಮರ ಉರುಳಿ ಬಿದ್ದಿದೆ. ಇದರಿಂದ ಎರಡು ಬದಿ ಸಂಪರ್ಕ ಕಡಿತಗೊಂಡಿದ್ದು, ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಘಟ್ಟ ಪ್ರದೇಶದಲ್ಲಿಯೇ ಸಾಲುಗಟ್ಟಿವೆ. ಇದನ್ನೂ ಓದಿ: ಗುತ್ತಿಗೆ ಆಯ್ತು, ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಹೆಚ್ಚಳ!

tree fell

ಸುಮಾರು 10-30 ರ ವೇಳೆ ಈ ಬೃಹತ್ ಮರ ಬಿದ್ದಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಕುಮಟಾ ಸಾಗರ ಬಸ್ ಸಂಚಾರ ಮಾಡಿದ್ದು, ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ನಂತರ ಬಂದ ಎಲ್ಲ ವಾಹನಗಳು ಎರಡು ಬದಿ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.

ಘಟ್ಟ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಸುದ್ದಿ ತಿಳಿದ ತಕ್ಷಣ ಸಿದ್ದಾಪುರ ಮಾರ್ಗದಿಂದ ಆಗಮಿಸಿದ ವಾಹನಗಳು ಉಡಳ್ಳಿ, ದೊಡ್ಮನೆ ಬಳಿ ಹಾಗೂ ಕುಮಟಾ ಮಾರ್ಗದಿಂದ ಆಗಮಿಸಿದ ವಾಹನಗಳು ಮಾಸ್ತಿಮನೆ, ಬಡಾಳ ಬಳಿ ನಿಲ್ಲಿಸಲಾಗಿದೆ. ಮರವನ್ನು ತೆರವು ಮಾಡಲಾಗುತ್ತಿದೆ. ಬೃಹತ್ ಮರವಾಗಿರುವ ಕಾರಣ ಇನ್ನಷ್ಟು ಸಮಯವಾಗಬಹುದು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

Share This Article