ಹಾಸನ: ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ರೈಲು ಹರಿದಿದೆ. ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಅಂಕಪುರ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.
ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ(16) ಮೃತಪಟ್ಟ ವಿದ್ಯಾರ್ಥಿನಿ. ಮೊಸಳೆಹೊಸಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ, ಇಂದು ಬೆಳಗ್ಗೆ ಕಾಲೇಜಿಗೆ ತೆರಳುವಾಗ ರೈಲು ಹಳಿ ದಾಟಲು ನಿಂತಿದ್ದಳು. ಈ ವೇಳೆ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವೇಳೆ ಅವಘಡ ನಡೆದಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.