ಬೆಂಗಳೂರು: ಸಲಿಂಗಿ (Gay) ಗಂಡನಿಂದ ಬೇಸತ್ತು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯಾದಾಗಿನಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ ಬಗ್ಗೆ ಅನುಮಾನಗೊಂಡು ವಾಟ್ಸಪ್ ಪರಿಶೀಲಿಸಿದಾಗ ಮಹಿಳೆಗೆ ಗಂಡನ ನಿಜ ಬಣ್ಣ ಬಯಲಾಗಿದೆ.
ಏನಿದು ಪ್ರಕರಣ?
ರಾಜಧಾನಿಯಲ್ಲಿ ಹೀಗೊಂದು ಪ್ರಕರಣ ನಡೆದಿದ್ದು, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಂಡ ದಿಗಂತ್ನಿಂದ ಮೋಸ ಹೋದ ಮಹಿಳೆ ಟೆಕ್ಕಿಯಾಗಿದ್ದಾರೆ. ಮಗನ ವಿಚಾರ ಗೊತ್ತಿದ್ದೂ ಆತನ ಪೋಷಕರು ಮದುವೆ ಮಾಡಿಸಿದ್ದರು. ಹೆಣ್ಣಿನ ಮನೆಯವರಿಂದ 160 ಗ್ರಾಂ ಚಿನ್ನಾಭರಣ ಹಾಗೂ ನಗದು ಪಡೆದು ಮಗ ಸಲಿಂಗಕಾಮಿ ಅನ್ನೋದನ್ನ ಬಚ್ಚಿಟ್ಟು ಮದುವೆ ಮಾಡಿಸಿದ್ದರು. ಮದುವೆಯಾದಾಗಿನಿಂದ ಈತ ಲೈಂಗಿಕ ಸಂಪರ್ಕ ಮುಂದೂಡುತ್ತಲೇ ಇದ್ದ. ಇದನ್ನೂ ಓದಿ: ಹೊಟ್ಟೆ ನೋವಿನ ಚಿಕಿತ್ಸೆಗೆ ಬಂದವ ಸಾವು- ಪುತ್ತೂರಿನ ಖ್ಯಾತ ವೈದ್ಯರ ವಿರುದ್ಧ ಆರೋಪ
ದಿಗಂತ್ ಸಹೋದರನಿಗೆ ಮಕ್ಕಳಾದ ಹಿನ್ನೆಲೆ ನೀನು ಮಕ್ಕಳು ಮಾಡಿಕೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಕ್ಕಳ ಬಗ್ಗೆ ಮಾತನಾಡುತ್ತಿದ್ದಂತೆ ದಿಗಂತ್ ಪಲಾಯನ ಮಾಡುತ್ತಿದ್ದ. ಪತಿಯ ನಡವಳಿಕೆ ಕಂಡು ಅನುಮಾನಗೊಂಡ ಟೆಕ್ಕಿ ಪತ್ನಿ ಆತನ ವಾಟ್ಸಪ್, ಮೆಸೆಂಜರ್ ಪರಿಶೀಲಿಸಿದ್ದಾಳೆ. ಈ ವೇಳೆ ಪತಿಯ ನಿಜ ಬಣ್ಣ ಬಯಲಾಗಿದೆ.
ತಾನಿರಬೇಕಾದ ಜಾಗದಲ್ಲಿ ಪರಪುರುಷ ಇರುವುದನ್ನು ಕಂಡು ಪತ್ನಿ ಶಾಕ್ ಆಗಿದ್ದಾಳೆ. ವಾಟ್ಸಪ್ನಲ್ಲಿ ತನ್ನ ಪತಿ ಪರಪುರುಷನ ಜೊತೆ ಅತಿ ಸಲುಗೆಯಿಂದಿದ್ದ ಫೋಟೋಗಳು ಪತ್ತೆಯಾಗಿವೆ. ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೋಟೋಗಳು ಕಂಡುಬಂದಿವೆ. ಇದರಿಂದ ನೊಂದ ಮಹಿಳೆ ಪತಿಯನ್ನ ಪ್ರಶ್ನೆ ಮಾಡಿದ್ದಳು. ಈ ವೇಳೆ ಪತ್ನಿ ಮೇಲೆ ಸಲಿಂಗಿ ದಿಗಂತ್ ಹಲ್ಲೆ ನಡೆಸಿದ್ದ. ಪತಿಯ ಪೋಷಕರಿಗೆ ಹೇಳಿದಾಗ, ಅನುಸರಿಸಿಕೊಂಡು ಹೋಗು ಎಂದು ಸುಮ್ಮನಾಗುತ್ತಿದ್ದರು. ಇದರಿಂದ ಬೇಸತ್ತು ಟೆಕ್ಕಿ ಮಹಿಳೆ ಸದ್ಯ ಪತಿ ದಿಗಂತ್ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ!
Web Stories