ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಮನೆದೇವರಾದ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ಕನಕಪುರ ಪಟ್ಟಣದಲ್ಲಿರುವ ಕೆಂಕೇರಮ್ಮ ದೇವಾಲಯದಲ್ಲಿ (Kenkeramma Temple) ಸೋಮವಾರ ಬೆಳಗ್ಗೆ ಅರ್ಚಕರು ಊಟಕ್ಕೆ ಹೋಗಿದ್ದಾಗ ದೇವಿಯ ಮೈಮೇಲೆ ಇದ್ದ 8 ಗ್ರಾಂ ತೂಕ ಚಿನ್ನದ ತಾಳಿ ಹಾಗೂ 50 ಗ್ರಾಂ ನಷ್ಟು ಬೆಳ್ಳಿ ಆಭರಣಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್
Advertisement
Advertisement
ಖದೀಮನ ಕೈಚಳಕ ದೇವಾಲಯದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ಸ್ಯಾಂಡಲ್ವುಡ್ ತಾರೆಯರು
Advertisement
Advertisement
ಕೂಡಲೇ ಕಳ್ಳನನ್ನ ಬಂಧಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಪ್ರತಿವರ್ಷವೂ ಈ ದೇವಾಲಯದಲ್ಲಿ ಅದ್ಧೂರಿ ಕೊಂಡೋತ್ಸವ ಜರುಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಡಿ.ಕೆ ಶಿವಕುಮಾರ್ ಚುನಾವಣಾ ಸಂದರ್ಭದಲ್ಲಿ ಕುಟುಂಬ ಸಮೇತ ಆಗಮಿಸಿ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
Web Stories