ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 80 ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ಬಳಿಕ ಅತ್ಯಾಚಾರವೆಸಗಿದ ಸಾಪ್ಟ್ ವೇರ್ ಎಂಜಿನಿಯರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಟೆಕ್ಕಿಯನ್ನು ಅಜಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಬೆಂಗಳೂರಿನ ವಿಜಯನಗರದ ನಿವಾಸಿ.
Advertisement
Advertisement
ಬಂಧಿತ ಟೆಕ್ಕಿ ಅಜಯ್ ಗೆ ಒಂದು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ ಯುವತಿಯೊಂದಿಗೆ ಪರಿಚಯವಾಗಿತ್ತು. ಪರಿಚಯದ ನಂತರ ಯುವತಿಯನ್ನು ರೆಸ್ಟೋರೆಂಟ್‍ನಲ್ಲಿ ಭೇಟಿ ಮಾಡಿದ ಟೆಕ್ಕಿ ತನ್ನ ಪ್ರೀತಿ ನಿವೇದನೆ ಮಾಡಿದ್ದನು. ಬಳಿಕ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
Advertisement
ತನ್ನ ಕಾಮ ತೃಷೆಯನ್ನು ತೀರಿಸಿಕೊಂಡ ಬಳಿಕ ಟೆಕ್ಕಿ, ತನ್ನ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿ ಯುವತಿಯನ್ನು ನಿರಾಕರಿಸಿದ್ದಾನೆ. ಇದರಿಂದ ನೊಂದ ಯುವತಿ ಟೆಕ್ಕಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರಿಯಕರನ ವಿರುದ್ಧ ಯುವತಿ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಸದ್ಯ ಪ್ರಕರಣ ಸಂಬಂಧ ಜಯನಗರ ಪೊಲೀಸರು ಆರೋಪಿ ಅಜಯ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..! https://t.co/rJVmJfW3y2#Tumakur #Reception #Night #Bride #Escape #Marriage pic.twitter.com/fXNUHl1BG7
— PublicTV (@publictvnews) November 12, 2017
ತಂದೆ, ಸಹೋದರನಿಂದಲೇ 9 ವರ್ಷ ನಿರಂತರ ಅತ್ಯಾಚಾರ- ತಾಯಿಂದ್ಲೇ ಮಗಳಿಗೆ 8 ಬಾರಿ ಗರ್ಭಪಾತ..! https://t.co/RjPWMdB3xl#Father #Brother #Mother #Rape #Abortion pic.twitter.com/fmRJopsdhY
— PublicTV (@publictvnews) November 12, 2017