ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೂ ಸ್ಯಾಂಡಲ್ ವುಡ್ ಗೂ ಗುರು ಶಿಷ್ಯರ ನಂಟಿದೆ. ಹಾಗಾಗಿ ಕನ್ನಡ ಸಿನಿಮಾ ರಂಗದಲ್ಲಿ ಅವರ ಕುರಿತಾಗಿ ಡಾಕ್ಯುಮೆಂಟರಿ, ವೆಬ್ ಸೀರಿಸ್ ಮತ್ತು ಸಿನಿಮಾಗಳ ರೂಪದಲ್ಲಿಯೂ ಶಿವಕುಮಾರ ಸ್ವಾಮೀಜಿ ದರ್ಶನ ಭಾಗ್ಯ ನೀಡಿದ್ದಾರೆ.
Advertisement
ಅಲ್ಲದೇ, ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಿಗೆ ಶ್ರೀಗಳು ಆಗಮಿಸಿದ ಆಶೀರ್ವಾದ ಮಾಡಿದ್ದಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಶಿವರಾಜ್ ಕುಮಾರ್, ಜಗ್ಗೇಶ್, ಯಶ್, ಸುದೀಪ್, ರಶ್ಮಿಕಾ ಮಂದಣ್ಣ, ಅರ್ಜುನ್ ಸರ್ಜಾ, ಉಪೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
Advertisement
Advertisement
ಶ್ರೀಗಳೇ ನಟಿಸಿರುವ ಸಿನಿಮಾ
Advertisement
ಓಂಕಾರ್ ನಿರ್ದೇಶನದಲ್ಲಿ ಮೂಡಿ ಬಂದ ಜ್ಞಾನ ಜ್ಯೋತಿ ಸಿದ್ಧಗಂಗಾ ಸಿನಿಮಾದಲ್ಲಿ ಸ್ವತಃ ಶಿವಕುಮಾರ ಸ್ವಾಮೀಜಿ ಕೂಡ ನಟಿಸಿದ್ದಾರೆ. ಇದು ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಸಿದ್ಧಗಂಗಾ ಮಠದ ಇತಿಹಾಸವನ್ನೇ ಹೇಳುವಂತಹ ಚಿತ್ರ ಇದಾಗಿದೆ. ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ, ಶ್ರೀಧರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ ಸಿನಿಮಾ ಇದಾಗಿದೆ. ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಮಠದಲ್ಲಿ ಓದುತ್ತಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹಾಡೊಂದರಲ್ಲಿ ತೋರಿಸಿದ್ದಾರೆ ನಿರ್ದೇಶಕರು.
ಶ್ರೀಗಳ ಕುರಿತು ವೆಬ್ ಸಿರೀಸ್
ಸಿದ್ಧಗಂಗಾ ಶ್ರೀಗಳ ಕುರಿತಾಗಿ ಹಂಸಲೇಖ ವೆಬ್ ಸೀರಿಸ್ ವೊಂದನ್ನು ತಯಾರಿಸಲು ರೆಡಿ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ ಸೇರಿದಂತೆ ಹತ್ತು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ವೆಬ್ ಸೀರಿಸ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಶ್ರೀಗಳ ಪಾತ್ರ ಮಾಡಬೇಕು ಎನ್ನುವುದು ಹಂಸಲೇಖಾ ಆಸೆ. ಹಾಗಾಗಿ ಅಮಿತಾಭ್ ಅವರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ಇನ್ನಷ್ಟೇ ಇದರ ಶೂಟಿಂಗ್ ಆರಂಭವಾಗಬೇಕಿದೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು
ನಿಡಸಾಲೆ ಪುಟ್ಟಸ್ವಾಮಯ್ಯ ತಯಾರಿಸಿದ ಸಿದ್ದಗಂಗಾ
ಕನ್ನಡದ ಹೆಸರಾಂತ ಪ್ರಕಾಶಕ, ಲೇಖಕ ಹಾಗೂ ನಟ ನಿಡಸಾಲೆ ಪುಟ್ಟಸ್ವಾಮಯ್ಯ ನಿರ್ಮಾಣದಲ್ಲಿ ‘ಸಿದ್ದಗಂಗಾ’ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದೆ. ಸಿದ್ಧಗಂಗಾ ಚಿತ್ರವು ಸಿದ್ದ ಮತ್ತು ಗಂಗಾರ ಬದುಕಿನ ಕಥೆಯಾಗಿದ್ದರೂ, ಸಿದ್ದಗಂಗಾ ಮಠದ ಇತಿಹಾಸವನ್ನೂ ಈ ಚಿತ್ರ ಹೇಳುತ್ತದೆ. ಈ ಸಿನಿಮಾದ ಆಡಿಯೋವನ್ನು ಸ್ವತಃ ಸಿದ್ಧಗಂಗಾ ಶ್ರೀಗಳೇ ಮಾಡಿದ್ದು ವಿಶೆಷ. ಜಿ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ನೈಜ ಬದುಕಿನ ಕಥಾಹಂದರ ಹೊಂದಿತ್ತು.
ಕಾಯಕ ಯೋಗಿ ಸಿನಿಮಾ
ನಿರ್ದೇಶಕ ಪುರುಷೋತ್ತಮ್ ಅವರು ‘ಕಾಯಕಯೋಗಿ’ ಶೀರ್ಷಿಕೆಯೊಂದಿಗೆ ಶ್ರೀಗಳ ಕುರಿತಾಗಿ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಸ್ವತಃ ಶ್ರೀಗಳೇ ಚಾಲನೆ ನೀಡಿದ್ದರು. ಭಕ್ತಿ ಪ್ರದಾನ ಸಿನಿಮಾಗಳಿಗೆ ಹೆಸರಾಗಿದ್ದ ಪುರುಷೋತ್ತಮ್, ಸಿದ್ಧಗಂಗಾ ಮಠದ ಚರಿತ್ರೆಯನ್ನು ಈ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದರು. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಟಗರು ಸಿನಿಮಾದಲ್ಲಿ ಶ್ರೀಗಳು
ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿಯೂ ಒಂದು ಸಣ್ಣ ಪಾತ್ರದಲ್ಲಿ ಶಿವಕುಮಾರ ಸ್ವಾಮಿಗಳು ಕಾಣಿಸಿಕೊಂಡಿದ್ದರು. ಈ ಮಠದಲ್ಲಿ ಬೆಳೆದ ಹುಡುಗನೊಬ್ಬ ದೊಡ್ಡ ಅಧಿಕಾರಿಯಾಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಹಾಗಾಗಿ ಶ್ರೀಗಳು ನಾಯಕನಿಗೆ ಆಶೀರ್ವಾದ ಮಾಡುವಂತಹ ದೃಶ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.