ಮೊಟ್ಟೆ ಪ್ರಿಯರಿಗೆ ಇಂದು ಮತ್ತೊಂದು ಸೂಪರ್ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ಇಂದು ನಾವು ಹೇಳಿಕೊಡುತ್ತಿರುವುದು ‘ಎಗ್ ಬೋಂಡಾ’. ಇದನ್ನು ಹೆಚ್ಚು ಜನರು ತಿಂದಿರುತ್ತಾರೆ. ಆದರೆ ಮನೆಯಲ್ಲಿ ಮಾಡುವುದು ತುಂಬಾ ಕಡಿಮೆ. ಆದರೆ ಈ ರೆಸಿಪಿ ತುಂಬಾ ಸರಳವಾಗಿರುತ್ತೆ. ಸವಿಯಲು ಸಖತ್ ಟೇಸ್ಟಿಯಾಗಿರುತ್ತೆ. ನೀವು ಟ್ರೈ ಮಾಡಿ.
Advertisement
ಬೇಕಾಗಿರುವ ವಿಧಾನ:
* ಬೇಯಿಸಿದ ಮೊಟ್ಟೆ – 3
* ಅಕ್ಕಿ ಹಿಟ್ಟು – 1/2 ಕಪ್
* ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್
Advertisement
* ಕರಿಮೆಣಸು – 1/2 ಟೀಸ್ಪೂನ್
* ಹಸಿರು ಮೆಣಸಿನಕಾಯಿ – 2
* ಕಡ್ಲೆ ಹಿಟ್ಟು – ಅರ್ಧ ಕಪ್
* ಅಗತ್ಯವಿರುವಷ್ಟು ಉಪ್ಪು
* ಡೀಪ್ ಫ್ರೈ ಮಾಡಲು ಎಣ್ಣೆ
Advertisement
Advertisement
ಮಾಡುವ ವಿಧಾನ:
* ಬೇಯಿಸಿದ ಮೊಟ್ಟೆಗಳನ್ನು ಎರಡು ಭಾಗಗಳಾಗಿ ಕತ್ತರಿಸಿ ಮೊಟ್ಟೆಗಳ ಮೇಲೆ ಸ್ವಲ್ಪ ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ.
* ಮಧ್ಯಮ ಉರಿಯಲ್ಲಿ ಒಂದು ಬಾಣಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುವ ಮುನ್ನ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿಗಳು, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಸ್ವಲ್ಪ ನೀರು ಸೇರಿಸಿ.
* ಬೇಯಿಸಿದ ಮೊಟ್ಟೆಯ ತುಂಡುಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯೊಳಗೆ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬರುವವರೆಗೆ ಡೀಪ್ ಫ್ರೈ ಮಾಡಿ.
– ಇದಕ್ಕೆ ಟೊಮೆಟೊ ಕೆಚಪ್ ಅಥವಾ ಹಸಿರು ಚಟ್ನಿಯೊಂದಿಗೆ ‘ಎಗ್ ಬೋಂಡಾ’ ಆನಂದಿಸಿ.