ಚಿಕ್ಕಬಳ್ಳಾಪುರ: ದೀಪಾವಳಿ (Deepavali) ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಇಂದಿನಿಂದ ಸಾಲು ಸಾಲು ರಜೆಗಳನ್ನು (Holidays) ನೀಡಲಾಗಿದೆ. ಜನ ಊರುಗಳಿಗೆ ತೆರಳಲು ಉತ್ಸುಕರಾಗಿದ್ದು, ಚೆನ್ನಾಗಿ ದುಡ್ಡು ಮಾಡಬಹುದು ಎಂದು ನಿರೀಕ್ಷೆಯಲ್ಲಿದ್ದ ಖಾಸಗಿ ಬಸ್ (Private Bus) ಮಾಲೀಕರಿಗೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಶಾಕ್ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕಡೆ ಆರ್‌ಟಿಒ (RTO) ಅಧಿಕಾರಿಗಳ ವಿಶೇಷ ತಂಡ ಖಾಸಗಿ ಬಸ್‌ಗಳ ಮೇಲೆ ದಾಳಿ ಆರಂಭ ಮಾಡಿದ್ದು, ಆರ್‌ಟಿಒ ಅಧಿಕಾರಿಗಳ ದಾಳಿಗೆ ಹೆದರಿರುವ ಖಾಸಗಿ ಬಸ್‌ಗಳ ಮಾಲೀಕರು ಬಸ್‌ಗಳ ಸಂಚಾರವನ್ನು ನಿಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲೂ ಆರ್‌ಟಿಒ ಅಧಿಕಾರಿ ವಿಜಯೇಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ನಿಲ್ದಾಣದಲ್ಲೇ ವಾಹನ ಸಮೇತ ಮೊಕ್ಕಾಂ ಹೂಡಿದ್ದಾರೆ. ಇದರಿಂದ ಬಸ್ ನಿಲ್ದಾಣದಲ್ಲೇ ಬಸ್‌ಗಳನ್ನು ಬಿಟ್ಟು ಖಾಸಗಿ ಬಸ್ ಚಾಲಕರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾರಿಂದ ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ: ಯಡಿಯೂರಪ್ಪ
ಇನ್ನೂ ಸಹಜವಾಗಿ ಎಂದಿನಂತೆ ಖಾಸಗಿ ಬಸ್ ಹತ್ತಲು ಬರುತ್ತಿರುವ ಪ್ರಯಾಣಿಕರು ಬಸ್ ಇಲ್ಲ ಎಂದು ತಿಳಿದು ಕೆಎಸ್‌ಆರ್‌ಟಿಸಿ ಸೇರಿ ಇತರೆ ವಾಹನಗಳನ್ನು ಅವಲಂಬಿಸಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲೇ ಸರ್ಕಾರದ ನಿರ್ದೇಶನದಂತೆ ಆರ್‌ಟಿಒ ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ಬಸ್‌ಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ: ವಿಜಯೇಂದ್ರಗೆ ಪಕ್ಷದ ಸಾರಥ್ಯ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ಮೌನ
ಅಂದಹಾಗೆ ಖಾಸಗಿ ಬಸ್‌ನವರು ಸಿಸಿ ಪರ್ಮಿಟ್ ಪಡೆದು ನಿಯಮಬಾಹಿರವಾಗಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು, ಇಳಿಸುವುದನ್ನು ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇಷ್ಟು ದಿನ ಕಂಡು ಕಾಣದಂತೆ ಆರ್‌ಟಿಒ ಅಧಿಕಾರಿಗಳಿದ್ದು, ಈಗ ಸರ್ಕಾರ ಇಲಾಖೆಯ ನಿರ್ದೇಶನದ ಮೇರೆಗೆ ದಾಳಿ ಆರಂಭ ಮಾಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ-ಬೆಂಗಳೂರು ಮಾರ್ಗದ ಖಾಸಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಬೂತ್ ಗೆದ್ದರೆ, ದೇಶ ಗೆಲ್ತೇವೆ: ಬಿವೈ ವಿಜಯೇಂದ್ರ