Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಂಟೆಗೆ 4,500 ರೂ – ರೈತರಿಗೆ ಹೊರೆಯಾದ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಗಂಟೆಗೆ 4,500 ರೂ – ರೈತರಿಗೆ ಹೊರೆಯಾದ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ

Districts

ಗಂಟೆಗೆ 4,500 ರೂ – ರೈತರಿಗೆ ಹೊರೆಯಾದ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ

Public TV
Last updated: November 22, 2025 11:26 pm
Public TV
Share
2 Min Read
Rice harvester machine
SHARE

ಕೊಪ್ಪಳ: ಭತ್ತದ ನಗರ ಗಂಗಾವತಿ ತಾಲೂಕಿನಲ್ಲಿ ಭತ್ತ ಕಟಾವು ಆರಂಭವಾಗಿದ್ದು, ಆದರೆ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಬೆಲೆ ರೈತರಿಗೆ ಹೊರೆಯಾಗಿದೆ. 4,500 ರೂ. ನೀಡಿ, ರೈತರು ಭತ್ತ ಕಟಾವು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ನೀರು ಬಳಕೆ ಮಾಡಿಕೊಂಡು ಗಂಗಾವತಿ, ಕಾರಟಗಿ ತಾಲೂಕುಗಳಲ್ಲಿ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ ಸರಿಸುಮಾರು 36 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗಿದೆ. ಇನ್ನೂ ಕನಕಗಿರಿ ತಾಲೂಕುಗಳಲ್ಲಿ ಸಹ ಕೆಲ ರೈತರು ಬೋರವೆಲ್ ನೀರು ಬಳಸಿ, ಭತ್ತವನ್ನು ಬೆಳೆಯುತ್ತಿದ್ದಾರೆ. ವಿವಿಧ ತಳಿಯ ಭತ್ತಗಳನ್ನು ಬೆಳೆಯುವ ಮೂಲಕ ಭತ್ತ ನಗರ ಎಂದು ಹೆಸರುವಾಸಿಯಾಗಿರುವ ಈ ಭಾಗದ ರೈತರಿಗೆ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಹೊರೆಯಾಗಿದ್ದು, ಸಂಕಷ್ಟದಲ್ಲಿ ರೈತರು ಭತ್ತ ಕಟಾವು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕೃಷಿ ಕೂಲಿಕಾರರ ಕೊರತೆ ಕಾಡುತ್ತಿರುವ ಕಾರಣಕ್ಕೆ ರೈತರು ಅನಿವಾರ್ಯವಾಗಿ ಭತ್ತ ಕಟಾವು ಮಾಡುವ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಮುಂಗಾರು ಹಂಗಾಮಿನ ಭತ್ತ ಕಟಾವು ಆರಂಭವಾಗಿದ್ದು, ರೈತರು ಬರದಿಂದ ಕಟಾವು ಮಾಡಲು ಮುಂದಾಗುತ್ತಿದ್ದಾರೆ. ಎಲ್ಲಾ ರೈತರು ಏಕಕಾಲಕ್ಕೆ ಕಟಾವು ಆರಂಭ ಮಾಡಿರುವ ಕಾರಣಕ್ಕೆ ಕಟಾವು ಯಂತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗಂಟೆಗೆ 600 ರಿಂದ 700 ರೂ. ಏರಿಕೆ ಮಾಡಲಾಗಿದೆ. ಕಳೆದ ವರ್ಷ ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆಯನ್ನು ನಡೆಸಿ, ಪ್ರತಿ ಗಂಟೆಗೆ 2,500 ರಿಂದ 2,600 ರೂ. ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ತಹಶೀಲ್ದಾರ್‌ ಸಭೆ ನಡೆಸಿ ಬಾಡಿಗೆ ನಿಗದಿ ಮಾಡದೆ ಇರುವ ಕಾರಣಕ್ಕೆ ಕಟಾವು ಯಂತ್ರ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಪ್ರತಿ ಗಂಟೆಗೆ 3,000 ರಿಂದ 3,200 ರೂಗಳ ಬಾಡಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಒಂದು ಎಕರೆ ಭತ್ತ ಕಟಾವು ಮಾಡಲು ಯಂತ್ರ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪ್ರತಿ ಎಕರೆ ಭತ್ತ ಕಟಾವು ಮಾಡಲು ರೈತರು 4,500 ರೂಗಳನ್ನು ವೆಚ್ಚ ಮಾಡಬೇಕಾಗಿದೆ. ಇದು ರೈತರಿಗೆ ಹೊರೆಯಾಗಿದ್ದು, ಆರ್ಥಿಕ ಸಂಕಷ್ಟ ಎದುರಾದರೂ ಬೆಳೆದಿರುವ ಬೆಳೆಯನ್ನು ಕಟಾವು ಮಾಡದೆ ಬಿಡಲು ಆಗದೆ ಅನಿವಾರ್ಯವಾಗಿ ಅಧಿಕ ಬೆಲೆ ನೀಡಿ, ಕಟಾವು ಮಾಡಿಸಲು ಮುಂದಾಗುತ್ತಿದ್ದಾರೆ.

ಇನ್ನೂ ಮುಂಗಾರು ಬೆಳೆಯ ಭತ್ತ ಕಟಾವು ಹಂತಕ್ಕೆ ಬಂದಿರುವ ಸಮಯದಲ್ಲಿಯೇ ಚಂಡಮಾರುತ ಕಾಣಿಸಿಕೊಂಡು ಗಾಳಿ, ಮಳೆ ಉಂಟಾಗಿತ್ತು. ಆದರಿಂದ ಬೆಳೆದ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಸಾಕಷ್ಟು ಪ್ರಮಾಣ ಭತ್ತ ನೆಲಕ್ಕೆ ಬಿದ್ದಿದ್ದು, ಈ ಭತ್ತವನ್ನು ಕಟಾವು ಮಾಡಲು ಯಂತ್ರವು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಒಂದು ಎಕರೆಗೆ ಒಂದು ಗಂಟೆಗೆ ಕಾಲಾವಕಾಶ ಸಾಕಾಗಿತ್ತು. ಭತ್ತ ನೆಲಕ್ಕೆ ಬಿದ್ದಿರುವ ಕಾರಣಕ್ಕೆ ಒಂದೂವರೆ ಗಂಟೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ನೆಲಕ್ಕೆ ಬಿದ್ದಿರುವ ಕಾರಣಕ್ಕೆ ಇಳುವರಿ ಕೂಡ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯು ಕಡಿಮೆಯಾಗಿದೆ. ಈ ಸಮಸ್ಯೆಗಳಿಂದ ಯಂತ್ರದ ಬಾಡಿಗೆ ರೈತರಿಗೆ ಹೊರೆಯಾಗುತ್ತಿದೆ.

TAGGED:farmersGangavathiKoppal
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Iraninan Oil
Latest

7 ವರ್ಷಗಳಲ್ಲಿ ಫಸ್ಟ್‌ ಟೈಮ್‌ – ಭಾರತಕ್ಕೆ ಬಂತು ಇರಾನಿನ 20 ಲಕ್ಷ ಬ್ಯಾರಲ್‌ ಕಚ್ಚಾ ತೈಲ

Public TV
By Public TV
5 minutes ago
ಸಾಂರ್ದಭಿಕ ಚಿತ್ರ
Bengaluru City

ಮೆಸೇಜ್‌, ಕಾಲ್‌ ಮಾಡಿ ಅನುಚಿತ ವರ್ತನೆ – ಖಾಸಗಿ ಆಸ್ಪತ್ರೆಯ ವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Public TV
By Public TV
21 minutes ago
Chikkamagaluru Balaki
Chikkamagaluru

ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು

Public TV
By Public TV
32 minutes ago
naseer ahmed 1
Bengaluru City

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್‌ ರಾಜೀನಾಮೆ

Public TV
By Public TV
47 minutes ago
Naxal
Latest

ಭಾರತದಲ್ಲಿ ನಕ್ಸಲ್‌ ಚಳವಳಿಯ ಅಂತ್ಯ – ʻರೆಡ್‌ ಕಾರಿಡಾರ್‌ʼ ಇತಿಹಾಸದ ಇನ್‌ಸೈಡ್ ಸ್ಟೋರಿ!

Public TV
By Public TV
9 hours ago
SRH 1
Cricket

ಹಿಂಗೆ ಬೆಂಕಿ ಬೌಲಿಂಗ್‌ಗೆ ರಾಯಲ್ಸ್‌ ಬರ್ನ್‌ – ಹೈದ್ರಾಬಾದ್‌ನಲ್ಲಿ ಸನ್‌ ಶೈನಿಂಗ್‌

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?