ಬೆಂಗಳೂರು: ಆಕಾಶದಲ್ಲಿ ಇಂದು ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ ನೈಸರ್ಗಿಕ ವಿದ್ಯಮಾನವೊಂದು ಜರುಗಿದೆ. ಸೂರ್ಯನ ಸುತ್ತ ಬೃಹತ್ ವೃತ್ತಾಕಾರದ ಬೆಳಕಿನ ವಲಯವೊಂದು ಮೂಡಿದ್ದು, ಸೂರ್ಯನಿಗೆ ಯಾರೋ ಬೆಳಕಿನ ಗೂಡು ಕಟ್ಟಿದಂತೆ ಈ ದೃಶ್ಯ ಕಂಗೊಳಿಸಿದೆ.
ಈ ವಿಸ್ಮಯಕಾರಿ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಏನಿದು ‘ಸನ್ ಹ್ಯಾಲೋ’ ವಿದ್ಯಮಾನ?
ವಿಜ್ಞಾನಿಗಳ ಪ್ರಕಾರ, ಈ ವಿದ್ಯಮಾನವನ್ನು ‘ಸನ್ ಹ್ಯಾಲೋ’ (Sun Halo) ಅಥವಾ ’22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ.
ಭೂಮಿಯಿಂದ ಅತಿ ಎತ್ತರದಲ್ಲಿರುವ ಸಿರಸ್ ಮೋಡಗಳಲ್ಲಿ ಕೋಟ್ಯಂತರ ಷಡ್ಭುಜಾಕೃತಿಯ ಸಣ್ಣ ಸಣ್ಣ ಮಂಜುಗಡ್ಡೆಯ ಹರಳುಗಳು (Ice Crystals) ತೇಲುತ್ತಿರುತ್ತವೆ. ಸೂರ್ಯನ ಬೆಳಕು ಈ ಮಂಜಿನ ಹರಳುಗಳ ಮೂಲಕ ಹಾದುಹೋಗುವಾಗ ಬೆಳಕಿನ ಕಿರಣಗಳು ವಕ್ರೀಭವನಗೊಂಡು (Refraction), ಸೂರ್ಯನ ಸುತ್ತ ಮಳೆಬಿಲ್ಲಿನಂತಹ ಸುಂದರ ಉಂಗುರವನ್ನು ಸೃಷ್ಟಿಸುತ್ತವೆ. ಇದನ್ನೂ ಓದಿ: ಬಾಗಲಕೋಟೆ ಶಾಲಾ ಕೊಠಡಿ ಮೇಲ್ಛಾವಣಿ ಕುಸಿತ: ಪ್ರಭಾರಿ ಮುಖ್ಯಶಿಕ್ಷಕ ಸೇರಿ ಇಬ್ಬರು ಇಂಜಿನಿಯರ್‌ಗಳು ಅಮಾನತು
ಒಟ್ಟಿನಲ್ಲಿ, ಕೆಲಕಾಲ ಆಕಾಶದಲ್ಲಿ ಅದ್ಭುತವಾಗಿ ಕಂಗೊಳಿಸಿದ ಈ ಅಪರೂಪದ ನೈಸರ್ಗಿಕ ವಿದ್ಯಮಾನವು ಚಿಕ್ಕಬಳ್ಳಾಪುರದ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ.ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್
