ಕೊಲ್ಕತ್ತಾ: ಸಾಮಾನ್ಯವಾಗಿ ಗ್ರೀನರಿ, ಬೆಟ್ಟ, ಗುಡ್ಡಗಳು ಹೆಚ್ಚಾಗಿ ಈಶಾನ್ಯ ಭಾರತದಲ್ಲಿ ಕಂಡು ಬರುತ್ತದೆ. ಆದರೆ ಉತ್ತರ ಬಂಗಾಳದ (North Bengal) ಪ್ರವಾಸಿಗರು ಟಿಕೆಟ್ ಇಲ್ಲದೇ ರೈಲ್ವೆ ಕ್ಯಾಬಿನ್‍ನಲ್ಲಿ ಕುಳಿತುಕೊಂಡು ಈ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಹೌದು, ಇದೇ ಮೊದಲ ಬಾರಿಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆಯು (North-East Frontier Railway) ಪ್ರತಿ ವರ್ಷ ಉತ್ತರ ಬಂಗಾಳಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗಾಗಿ ವೀಲ್‍ಗಳ ಮೇಲೆ ನಿರ್ಮಿಸಲಾಗಿರುವ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದೆ. ಈ ರೆಸ್ಟೋರೆಂಟ್‍ನಲ್ಲಿ ಸುಮಾರು 40 ಜನ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ
Advertisement
Advertisement
ಹಾಳಾಗಿರುವ ರೈಲ್ವೆ ಕೋಚ್ ಅನ್ನು ಸಿಂಗರಿಸಿ, ಸುಂದರವಾದ ರೆಸ್ಟೋರೆಂಟ್ ಆಗಿ ರೈಲ್ವೆ ಅಧಿಕಾರಿಗಳು ಪರಿವರ್ತಿಸಿದ್ದಾರೆ. ಸಿಲಿಗುರಿಯ ನ್ಯೂ ಜಲ್ಪೈಗುರಿ ರೈಲು (New Jalpaiguri railway) ನಿಲ್ದಾಣದಲ್ಲಿ ಈ ಹವಾನಿಯಂತ್ರಿತ ರೆಸ್ಟೋರೆಂಟ್ ಇದ್ದು, ಒಳಗಡೆ ಬಗೆಬಗೆಯ ತಿಂಡಿ, ತಿನಿಸುಗಳಿರುವಂತೆ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಚುನಾವಣೆಗೆ ಕೋರ್ಟ್ ಗ್ರೀನ್ ಸಿಗ್ನಲ್
Advertisement
ರೈಲಿನ ಹೊರಗೆ ದೆಹಲಿಯ ಕೆಂಪು ಕೋಟೆ, ಸೇತುವೆ, ವಿಕ್ಟೋರಿಯಾ ಸ್ಮಾರಕವನ್ನು ಯೆಲ್ಲೋ ಕಲರ್ ಪೇಯಿಟಿಂಗ್‍ನಿಂದ ಚಿತ್ರಬಿಡಿಸಲಾಗಿದೆ. ಭಾರತೀಯ, ಚೈನೀಸ್ ಮತ್ತು ಸೌತ್ ಫುಡ್ ಹೀಗೆ ಎಲ್ಲಾ ರೀತಿಯ ಆಹಾರಗಳು ಲಭ್ಯವಿದೆ ಎಂದು ರೆಸ್ಟೋರೆಂಟ್‍ನ ವ್ಯವಸ್ಥಾಪಕ ಬಿಸ್ವಜಿತ್ ಜಾನಾ ಹೇಳಿದ್ದಾರೆ.
Advertisement
ಈ ರೆಸ್ಟೋರೆಂಟ್ ಅನ್ನು ನಿರ್ಮಾಣ ಮಾಡುವ ಬಗ್ಗೆ ಮೊದಲ ಬಾರಿಗೆ ಜನರಲ್ ಮ್ಯಾನೇಜರ್ ಅನ್ಸುಲ್ ಗುಪ್ತಾ ಅವರು ಯೋಚಿಸಿದರು. ಇದನ್ನು ಮೊದಲ ಬಾರಿಗೆ ನ್ಯೂ ಜಲ್ಪೈಗುರಿ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಎಡಿಆರ್‍ಎಂ ಸಂಜಯ್ ಚಿಲವರ್ವಾರ್ ತಿಳಿಸಿದ್ದಾರೆ. ಅತ್ಯಾಧುನಿಕ ಈ ರೆಸ್ಟೋರೆಂಟ್ ಬೆಳಗ್ಗೆ 6 ರಿಂದ 10ರವರೆಗೆ ತೆರೆದಿರುತ್ತದೆ.