ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ! ವೈರಲ್ ವಿಡಿಯೋ

Public TV
1 Min Read
MP BJP MLA

ನಗಾಡಾ: ವಿಧಾನಸಭಾ ಚುಣಾವಣೆಯಲ್ಲಿ ಜನರ ಬಳಿ ಮತ ಕೇಳಲು ಬಂದಿದ್ದ ಶಾಸಕರೊಬ್ಬರಿಗೆ ಸಾರ್ವಜನಿಕವಾಗಿ ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ನಗಾಡಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ನಗಾಡಾ ಕ್ಷೇತ್ರದ ಬಿಜೆಪಿ ಪಕ್ಷದ ಹಾಲಿ ಶಾಸಕ ದಿಲೀಪ್ ಶೇಖಾವತ್ ಅವರಿಗೆ ಚಪ್ಪಲಿ ಹಾರ ಹಾಕಲಾಗಿದ್ದು, ಭಾನುವಾರ ಸಂಜೆ ವೇಳೆ ಕ್ಷೇತ್ರದ ಹಳ್ಳಿಯೊಂದರಲ್ಲಿ ಮತ ಕೇಳಲು ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಚಪ್ಪಲಿ ಹಾರ ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದ ಶಾಸಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಜನರ ಮಧ್ಯೆ ಬಂದ ಅವರಿಗೆ ಹಲವು ಅಭಿಮಾನಿಗಳು ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಆದರೆ ಈ ನಡುವೆ ಜನರ ಮಧ್ಯದಿಂದ ಬಂದ ವ್ಯಕ್ತಿಯೊಬ್ಬ ಶಾಸಕನಿಗೆ ಚಪ್ಪಲಿ ಹಾರ ಹಾಕಿದ. ಕೂಡಲೇ ಎಚ್ಚೆತ್ತಾ ಶಾಸಕ ಹಾರ ಕಿತ್ತುಹಾಕಿ ಆತನ ಮೇಲೆ ಕೋಪದಿಂದ ಹಲ್ಲೆ ನಡೆಸಲು ಮುನ್ನಡೆದಿದ್ದು ವಿಡಿಯೋದಲ್ಲಿ ಕಾರಣಬಹುದಾಗಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿ ಬಿಜೆಪಿ ಪಕ್ಷದ ಟೋಪಿ, ಶಾಲು ಧರಿಸಿ ಜನರ ಮಧ್ಯೆ ಆಗಮಿಸಿದ್ದ. ಪ್ರಚಾರದ ಭಾಗವಾಗಿ ಜನರ ನಡುವೆ ಆಗಮಿಸಿದ್ದ ಶಾಸಕರು ಹತ್ತಿರ ಆಗಮಿಸುತ್ತಿದಂತೆ ಏಕಾಏಕಿ ಚಪ್ಪಲಿ ಹಾರ ಹಾಕಿದ್ದಾನೆ. ವರ್ಷದ ಆರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುಣಾವಣೆ ವೇಳೆಯೂ ಬಿಜೆಪಿ ನಾಯಕರೊಬ್ಬರಿಗೆ ಚಪ್ಪಲಿ ಹಾರ ಹಾಕಿದ ಘಟನೆ ನಡೆದಿತ್ತು. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನ.28 ರಂದು ನಡೆಯಲಿದ್ದು, ಡಿ. 11 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

MP BJP MLA 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *