ಶಾರುಖ್ ಖಾನ್ ಜೊತೆ ಜವಾನ ಸಿನಿಮಾದಲ್ಲಿ ನಟಿಸಿರುವ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಇದೀಗ ಸದ್ದಿಲ್ಲದೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ತಾಯಿಯಾದ ನಂತರ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ನಯನತಾರಾ ಈಗ ತಮಿಳು ಚಿತ್ರಕ್ಕೆ ಸಹಿ ಮಾಡಿದ್ದು, ಇದು ಮಹಿಳಾ ಪ್ರಧಾನ (Female Lead) ಸಿನಿಮಾ ಎನ್ನುವುದು ವಿಶೇಷ.
ತಮ್ಮ ಯೂಟ್ಯೂಬ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಡ್ಯೂಡ್ ವಿಕ್ಕಿ (Dude Vicky) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾವಾದರೂ ನಯನತಾರಾ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಕಾರಣ, ಈ ಸಿನಿಮಾದ ಸ್ಕ್ರಿಪ್ಟ್ ಎನ್ನುವುದು ಚಿತ್ರತಂಡದ ಮಾತು. ಇದೇ ಮೊದಲ ಬಾರಿಗೆ ನಯನಾ ಅಂಥದ್ದೊಂದು ಪಾತ್ರವನ್ನು ಪೋಷಿಸುತ್ತಿದ್ದಾರಂತೆ. ಇದನ್ನೂ ಓದಿ:ಮೊಟ್ಟೆ ಪೋಸ್‌ನಲ್ಲಿ ಕಿಕ್ ಕೊಟ್ಟ ನಟ ಧನುಷ್- ‘D50’ ಚಿತ್ರದ ಫಸ್ಟ್ ಲುಕ್ ಔಟ್
ಮಹಿಳಾ ಪ್ರಧಾನ ಸಿನಿಮಾವಾದರೂ, ಥ್ರಿಲ್ಲರ್ ಅಂಶಗಳು ಸಿನಿಮಾದ ಜೀವಾಳವಂತೆ. ಚಿತ್ರದ ಮತ್ತೊಂದು ವಿಶೇಷ ಅಂದರೆ, ನಯನತಾರಾ ಜೊತೆ ಯೋಗಿ ಬಾಬು (Yogi Babu) ಕೂಡ ತಾರಾಗಣದಲ್ಲಿ ಇದ್ದಾರೆ. ಯೋಗಿ ಬಾಬು ಇದ್ದಾರೆ ಅಂದರೆ ಅಲ್ಲಿ ಕಾಮಿಡಿಗೆ ಕೊರತೆ ಇರುವುದಿಲ್ಲ. ನಗಿಸುತ್ತಲೇ ಹೊಸದೊಂದು ಕಥೆ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.
ಇದೇ ಜುಲೈ 15 ರಂದು ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನೂ ಚಿತ್ರತಂಡ ಮಾಡಿಕೊಂಡಿದೆ. ನಯನತಾರಾ ಕೂಡ ಪಾತ್ರಕ್ಕಾಗಿ ವಿಶೇಷ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕರ ಮೊದಲ ಸಿನಿಮಾ ಇದಾಗಿದ್ದರೂ, ದೊಡ್ಡ ಸಂಸ್ಥೆಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]