ಬೆಂಗಳೂರು: ಇಲ್ಲಿನ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ (Gym Trainer) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ನಂದನ್ (25) ಸಾವನ್ನಪ್ಪಿರುವ ಜಿಮ್ ಟ್ರೈನರ್. ಶನಿವಾರ ಜಿಮ್ ಮೊದಲ ವರ್ಷದ ಆ್ಯನಿವರ್ಸರಿ ಇತ್ತು. ತಡವಾದರೆ ಬೆಳಗ್ಗೆ ಬರುತ್ತೇನೆ ಅಂತ ಮನೆಯವರಿಗೆ ಹೇಳಿ ನಂದನ್ ತೆರಳಿದ್ದರು. ಆ್ಯನಿವರ್ಸರಿ ಮುಗಿಸಿ ಇತರೆ ಸಿಬ್ಬಂದಿ ಜೊತೆ ಪರಿಚಿತರ ಅಪಾರ್ಟ್ಮೆಂಟ್ಗೆ ಹೋಗಿದ್ದರು. ಈ ವೇಳೆ ಗಲಾಟೆ ನಡೆದು ನಂದನ್ ಮೇಲೆ ಹಲ್ಲೆಯಾಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆತಂಕ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ
ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ನಂದನ್ ಸಾವನ್ನಪ್ಪಿದ್ದಾರೆ. ವಿಚಾರ ತಿಳಿದು ಆಸ್ಪತ್ರೆಗೆ ಜಿಮ್ ಟ್ರೈನರ್ ತಾಯಿ ತೆರಳಿದ್ದರು. ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಅಮೃತಹಳ್ಳಿ ಪೊಲೀಸ್ ಠಾಣೆಗೆ ನಂದನ್ ತಾಯಿ ಮಂಜುಳಾ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಲ್ವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ

