ಮದ್ಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಮನೆಯಿಂದ 1.5 ಕೋಟಿ ದೋಚಿದ್ದ ದಂಪತಿ

Public TV
2 Min Read
jayanagara sampige theatre theaf arrest

– ಸಂಪಿಗೆ ಥಿಯೇಟರ್ ಮಾಲೀಕನ ಮನೆ ಕಳ್ಳತನ
– ತನಿಖೆ ವೇಳೆ ಹಲವು ವಿಷಯ ಬಹಿರಂಗ

ಬೆಂಗಳೂರು: ನೇಪಾಳಿ ದಂಪತಿ ಮದಿರೆಯಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಸಂಪಿಗೆ ಥಿಯೇಟರ್ (Sampige Theatre) ಮಾಲೀಕನ ಮನೆ ದೋಚಿರುವ ವಿಷಯ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಅ.2ರಂದು ಬೆಂಗಳೂರಿನ (Bengaluru) ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಎಂಬುವವರ ಜಯನಗರದ ಮನೆಯಲ್ಲಿ ಕಳ್ಳತನ ನಡೆದಿತ್ತು. ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ದಂಪತಿ ಎರಡು ವರ್ಷದ ಹಿಂದೆ ನಾಗೇಶ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ದಂಪತಿ ಮಾಲೀಕನ ಬಳಿ ನಂಬಿಕೆ ಬರುವಂತೆ ವಿಶ್ವಾಸ ಬೆಳೆಸಿಕೊಂಡಿದ್ದರು. ಅ.2ರಂದು ರಾತ್ರಿ ಮಾಲೀಕ ಮದ್ಯಪಾನ ಮಾಡುವ ವೇಳೆ ದಂಪತಿ ಮದ್ಯದಲ್ಲಿ ಬೆಂಜೊಡೈನ್ ಎಂಬ ಪೌಡರ್ ಮಿಕ್ಸ್ ಮಾಡಿದ್ದರು. ನಂತರ ನಾಗೇಶ್ ಪ್ರಜ್ಞೆ ತಪ್ಪಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದನ್ನೂ ಓದಿ: ಚೀನಾದಲ್ಲಿ ಕಾರು ಚಾಲಕನ ಹುಚ್ಚಾಟಕ್ಕೆ 35 ಬಲಿ, 43 ಮಂದಿಗೆ ಗಾಯ

jayanagara sampige theatre theaf arrest 1

ಜಯನಗರ ಪೊಲೀಸರು (Jayanagara Police) ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೂವರನ್ನ ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ದೀಪಕ್ ಮತ್ತು ತಂಡ ಆರೋಪಿಗಳನ್ನು ನೇಪಾಳಕ್ಕೆ ತಲುಪುವ ಮೊದಲೇ ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ದೋಚಲು ಎರಡು ವರ್ಷದಿಂದ ದಂಪತಿ ಕಾದಿದ್ದರು. ಮಾಲೀಕನ ಕುಟುಂಬ ಹೊರಗಡೆ ಹೋಗಿದ್ದು, ವಯಸ್ಸಾದ ನಾಗೇಶ್ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಮದ್ಯದಲ್ಲಿ ಅಮಲು ಬರುವ ಪದಾರ್ಥ ಬೆರೆಸಿ ಮೂವರನ್ನ ಬೈಕ್‌ನಲ್ಲಿ ಕರೆಸಿಕೊಂಡು ತಮ್ಮ ಕೆಲಸವನ್ನು ನೇಪಾಳಿ ದಂಪತಿ ಮುಗಿಸಿಕೊಂಡಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಲೋಕಾ ಶಾಕ್- ಕೆಐಎಡಿಬಿ AEE ಮನೆಗೆ ದಾಳಿ

ಈ ಸಂಬಂಧ ಪ್ರಕಾಶ್ ಶಾಹಿ, ಅಪಿಲ್ ಶಾಹಿ, ಜಗದೀಶ್ ಶಾಹಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮನೆಯಲ್ಲಿದ್ದ 1.50 ಕೋಟಿ ರೂ. ಬೆಲೆಬಾಳುವ 2 ಕೆಜಿ ಚಿನ್ನಾಭರಣ, 2 ಲಕ್ಷ ರೂ. ನಗದು ಹೊತ್ತೊಯ್ದಿದ್ದರು. ಸಿಸಿಟಿವಿ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ದಂಪತಿ ಗಣೇಶ್ ಹಾಗೂ ಗೀತಾಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಲೋಕಾ ಶಾಕ್- ಕೆಐಎಡಿಬಿ AEE ಮನೆಗೆ ದಾಳಿ

Share This Article