ಚಿಕ್ಕಮಗಳೂರು: ಕಾರೊಂದು (Car) ಹೊತ್ತಿ ಉರಿದ (Fire) ಘಟನೆ ಶೃಂಗೇರಿಯ (Sringeri) ಎಸ್.ಕೆ. ಬಾರ್ಡರ್ ಬಳಿ ನಡೆದಿದೆ. ಈ ಅವಘಡದಲ್ಲಿ ದಂಪತಿ ಹಾಗೂ ಮಗ ಅಪಾಯದಿಂದ ಪಾರಾಗಿದ್ದಾರೆ.
ರೆನಾಲ್ಟ್ ಕಂಪನಿಗೆ ಸೇರಿದ ಡಸ್ಟರ್ ಕಾರು ಶಾರ್ಟ್ ಸರ್ಕ್ಯೂಟ್ನಿಂದ ರಸ್ತೆಯ ಮಧ್ಯದಲ್ಲೇ ಹೊತ್ತಿ ಉರಿದಿದೆ. ಬೆಂಕಿ ಕಾಣಿಸುತ್ತಿದಂತೆ ಕಾರನ್ನು ನಿಲ್ಲಿಸಿ ಮೂವರು ತಕ್ಷಣ ಹೊರಗೆ ಇಳಿದಿದ್ದಾರೆ. ಇದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ರಾಸಾಯನಿಕ ತುಂಬಿದ್ದ ಟ್ಯಾಂಕರ್ – 8 ಕಿಮೀ ಟ್ರಾಫಿಕ್ ಜಾಮ್
ದಂಪತಿ ಕುಂದಾಪುರದಿಂದ ಶೃಂಗೇರಿ ದೇವಸ್ಥಾನಕ್ಕೆ ಬರುತ್ತಿದ್ದರು. ಈ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ. ಈ ಅವಘಡ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು
