22 ಕೋಟಿ ರೂ.ಗೆ ಮಾರಾಟವಾಯ್ತು 60 ವರ್ಷ ಹಳೆಯ ಒಂದು ಬಾಟಲಿ ವಿಸ್ಕಿ

Public TV
1 Min Read
whiskey 22 crore

ಬ್ರಿಟನ್: ಲಂಡನ್‌ನಲ್ಲಿರುವ (London) ಪ್ರಸಿದ್ಧ ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಸೋಥೆಬೈಸ್ ನಡೆಸಿದ ಹರಾಜಿನಲ್ಲಿ ಮಕಲನ್ ಕಂಪನಿ ತಯಾರಿಸಿದ ಸಿಂಗಲ್ ಮಾಲ್ಟ್ ವಿಸ್ಕಿ 22 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

2019ರಲ್ಲಿ ಇದೇ ಕಂಪನಿ ತಯಾರಿಸಿದ್ದ ವಿಸ್ಕಿಯು 15 ಕೋಟಿ ರೂ. ಮಾರಾಟವಾಗಿತ್ತು. ಆ ದಾಖಲೆಯನ್ನು ‘ದಿ ಮಕಲನ್‌ ಅದಾಮಿ 1926’ ಹೆಸರಿನ ವಿಸ್ಕಿ ಮುರಿದಿದೆ. ಮಕಲನ್ ಕಂಪನಿಯು 1926 ರಲ್ಲಿ ಈ ವಿಸ್ಕಿಯನ್ನು ತಯಾರಿಸಿತ್ತು. ಅದನ್ನು 60 ವರ್ಷಗಳ ವರೆಗೆ ಉಳಿಸಿಕೊಂಡಿತ್ತು. ಇದನ್ನೂ ಓದಿ: ಮಣಿಪುರ ಏರ್‌ಪೋರ್ಟ್ ಮೇಲೆ ಅಪರಿಚಿತ ಡ್ರೋನ್ ಹಾರಾಟ – ಹೆಚ್ಚಿದ ಆತಂಕ

ಸೋಥೆಬೈಸ್‌ನಲ್ಲಿ ವಿಸ್ಕಿಯನ್ನು ಹರಾಜಿಗೆ ಇಡಲಾಗಿತ್ತು. ಇದು 22 ಲಕ್ಷ ಪೌಂಡ್‌ (22.48 ಕೋಟಿ ರೂ.)ಗೆ ಹರಾಜಾಗಿ ಹೊಸ ದಾಖಲೆ ಬರೆದಿದೆ.

ಪ್ರತಿಯೊಬ್ಬ ಹರಾಜುದಾರರು ಈ ರೀತಿಯ ವಿಸ್ಕಿಯನ್ನು ಮಾರಾಟ ಮಾಡಲು ಬಯಸುತ್ತಾರೆ. ಹಾಗೆಯೇ ಖರೀದಿದಾರರು ಅದನ್ನು ಹೊಂದಲು ಬಯಸುತ್ತಾರೆ ಎಂದು ಹರಾಜನ್ನು ಆಯೋಜಿಸಿದ ಸೋಥೆಬಿ ಕಂಪನಿಯ ವ್ಯವಸ್ಥಾಪಕರು ಹೇಳಿದ್ದಾರೆ. ಇದನ್ನೂ ಓದಿ: ಸುರಂಗ ಕಾಮಗಾರಿ ವೇಳೆ ಭೂಕುಸಿತ – ಕಾರ್ಮಿಕರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕು

Share This Article