ಇಂಫಾಲ್: ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Airport) ವಾಯುಪ್ರದೇಶದಲ್ಲಿ ಅಪರಿಚಿತ ಡ್ರೋನ್‍ಗಳು ಹಾರಾಟ ನಡೆಸಿದ್ದು, ವಿಮಾನ ಹಾರಾಟದ ಕಾರ್ಯಾಚರಣೆಯನ್ನು ರದ್ದು ಪಡೆಸಲಾಗಿದೆ. ಈ ಘಟನೆಯಿಂದ ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಮತ್ತೆ ಆತಂಕ ಶುರುವಾಗಿದೆ.
ಕೆಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಇನ್ನೂ ಕೆಲವು ವಿಮಾನಗಳನ್ನು ಮಾರ್ಗ ಮಧ್ಯದಿಂದಲೇ ಬೇರೆಡೆಗೆ ತಿರುಗಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಚಿಪೆಮ್ಮಿ ಕೀಶಿಂಗ್, ಇಂಫಾಲ್ (Imphal) ನಿಯಂತ್ರಿತ ವಾಯುಪ್ರದೇಶದಲ್ಲಿ ಅಪರಿಚಿತ ಹಾರುವ ವಸ್ತುವೊಂದು ಕಂಡುಬಂದ ಕಾರಣ, ಎರಡು ವಿಮಾನಗಳನ್ನು ತಿರುಗಿಸಲಾಗಿದೆ ಮತ್ತು ಮೂರು ಹೊರಡುವ ವಿಮಾನಗಳು ವಿಳಂಬವಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸುರಂಗ ಕಾಮಗಾರಿ ವೇಳೆ ಭೂಕುಸಿತ – ಕಾರ್ಮಿಕರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕು
Advertisement
Advertisement
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತಿಕೂಲವಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿತ್ತು. ಬಳಿಕ ನಿಷೇಧವನ್ನು ನ.23ರ ವರೆಗೆ ವಿಸ್ತರಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.
Advertisement
Advertisement
ಪರಿಶಿಷ್ಟ ಪಂಗಡದ (ಎಸ್‍ಟಿ) ಸ್ಥಾನಮಾನಕ್ಕಾಗಿ ಮೇಥಿ ಬುಡಕಟ್ಟು ಜನಾಂಗ ಮೆರವಣಿಗೆ ನಡೆಸಿತ್ತು. ಇದು ಮೇ 3 ರಂದು ಎರಡು ಬುಡಕಟ್ಟು ಗುಂಪುಗಳಾದ ಕುಕಿಸ್ ಮತ್ತು ಮೇಥಿ ನಡುವೆ ನಡೆದ ಜನಾಂಗೀಯ ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದರು. ಈ ಘರ್ಷಣೆ ಇನ್ನೂ ಸಹ ಬೂದಿ ಮುಚ್ಚಿದ ಕೆಂಡದಂತಿದ್ದು ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಾರಿಗೆ ಟ್ರಕ್ ಡಿಕ್ಕಿ – ಮೋದಿ ಭದ್ರತೆಗೆ ತೆರಳುತ್ತಿದ್ದ 6 ಪೊಲೀಸರ ದುರ್ಮರಣ