ಗಾಂಧೀನಗರ: ಗುಜರಾತ್ ಚುನಾವಣೆ (Gujarat Assembly Election) ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ಯುಸಿ ಇದ್ದಾರೆ. ಈ ಹೊತ್ತಲ್ಲೇ ಅವರ ಭದ್ರತೆ ವಿಚಾರದಲ್ಲಿ ಲೋಪ ಉಂಟಾಗಿದೆ.
ಅಹಮದಾಬಾದ್ ಜಿಲ್ಲೆಯ ಬಾವ್ಲಾದಲ್ಲಿ ಇಂದು ಸಂಜೆ ನಡೆದ ರ‍್ಯಾಲಿಯಲ್ಲಿ ಮೋದಿ ಭಾಷಣದ ವೇಳೆಯೇ, ನಿಷೇಧಿತ ಪ್ರದೇಶದಲ್ಲಿ ಹಾರಿದ ಡ್ರೋನ್ (Drone) ಕ್ಯಾಮೆರಾ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತ ಎನ್‍ಎಸ್‍ಜಿ, ಡ್ರೋನ್ ಕ್ಯಾಮೆರಾವನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ
Gujarat | Police arrests, registers case against 3 people-Nikul Rameshbhai Parmar, Rakesh Kalubhai Bharvad & Rajeshkumar Mangilal Prajapati- for recording video using a drone & violating 'no drone fly zone' during the visit of PM Modi at Bavla today: Ahmedabad Police pic.twitter.com/B5tRz49dh0
— ANI (@ANI) November 24, 2022
ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ನಿಖಿಲ್ ಪಾರ್ಮರ್, ರಾಕೇಶ್ ಭಾರ್ವಾದ್, ರಾಕೇಶ್ ಕುಮಾರ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಮೂವರು ಅಹಮದಾಬಾದ್‍ನ ಓಧವ್ ನಿವಾಸಿಗಳಾಗಿದ್ದಾರೆ. ಐಪಿಸಿ ಸೆಕ್ಷನ್ 188ರ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ. ಈ ಸಂಬಂಧ ಹಲವು ಸಂಸ್ಥೆಗಳು ಏಕಕಾಲದಲ್ಲಿ ಸಮಗ್ರ ತನಿಖೆ ನಡೆಸಿವೆ. ಇದನ್ನೂ ಓದಿ: 225 ಮೀ. ಆಳದ ಕಲ್ಲಿದ್ದಲು ಗಣಿ ಝಾಂಜ್ರಾ ಒಳಗೆ ಪ್ರವೇಶಿಸಿ ಪರಿಶೀಲಿಸಿದ ಮೊದಲ ಸಚಿವ ಪ್ರಹ್ಲಾದ್ ಜೋಶಿ
ಪ್ರಧಾನಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರದೇಶ ಡ್ರೋನ್ ನಿಷೇಧಿತ ಪ್ರದೇಶವಾಗಿತ್ತು. ಆದರೂ ನಿಷೇಧಿತ ಪ್ರದೇಶದಲ್ಲೇ ಡ್ರೋನ್ ಹಾರಾಟ ನಡೆಸಿ ಮೂವರು 2 ಕಿ.ಮೀ ವರೆಗೆ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ. ಬಳಿಕ ಕೂಡಲೇ ಪೊಲೀಸರು ಡ್ರೋನ್ ಹಾರಿಸದಂತೆ ತಿಳಿಸಿದ್ದಾರೆ. ಬಳಿಕ ಕೆಳಗಿಳಿಸಿ ಪರಿಶೀಲಿಸಿದಾಗ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ.