`ಕಾಂತಾರ’ ದೈವದ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್: ಡಿಸಿ ಶಾಕ್

Public TV
1 Min Read
kantara 1 1

ಚಿತ್ರರಂಗದ ದಶದಿಕ್ಕುಗಳಲ್ಲೂ ಸೌಂಡ್ ಸಿನಿಮಾ ಅಂದ್ರೆ `ಕಾಂತಾರ’ (Kantara Film) ಚಿತ್ರ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನಕ್ಕೆ, ನಟನೆಗೆ ಇಡೀ ಭಾರತೀಯ ಚಿತ್ರರಂಗವೇ ಸಲಾಮ್ ಹೊಡೆದಿದೆ. ಸಿನಿಪ್ರೇಮಿಗಳು `ಕಾಂತಾರ’ (Kantara) ಸಿನಿಮಾವನ್ನ ನೋಡಿ, ಖುಷಿಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಈ ಚಿತ್ರದ ಬಗ್ಗೆ ಕ್ರೇಜ್ ಕೂಡ ಹೆಚ್ಚಾಗುತ್ತಿದ್ದು, ಇದೀಗ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ತಹಶೀಲ್ದಾರ್ ಕಾಂತಾರ ದೈವದ ಗೆಟಪ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Kantara 5

ಕಾಂತಾರ ಚಿತ್ರಕ್ಕೆ ಕನ್ನಡ ಸಿನಿಪ್ರೇಕ್ಷಕರು ಮಾತ್ರವಲ್ಲ ದೇಶ ವಿದೇಶದಲ್ಲೂ ಚಿತ್ರಕ್ಕೆ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಕದ ರಾಜ್ಯ ತೆಲುಗು ನಾಡಿನಲ್ಲೂ `ಕಾಂತಾರ’ ಹವಾ ಜೋರಾಗಿದೆ.ಇದಕ್ಕೆ ತಾಜಾ ಉದಾಹರಣೆ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಹಶೀಲ್ದಾರ್ `ಕಾಂತಾರ’ ದೈವದ ಗೆಟಪ್ ಹಾಕುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ.

kantara 1

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಅವರು ಕನ್ನಡದ ಕಾಂತಾರ ಸಿನಿಮಾದ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಪ್ರಸಾದ್ ರಾವ್ ಅವತಾರ ಕಂಡು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಪಟ್ಟರು. ವೇಷ ಮಾತ್ರವಲ್ಲದೇ ಅವರು `ಕಾಂತಾರ’ ಚಿತ್ರದ ಡೈಲಾಗ್ ಕೂಡ ಹೇಳಿ ಗಮನ ಸೆಳೆದರು. ಇದನ್ನೂ ಓದಿ:ಸಾರಾ ಜೊತೆಗಿನ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ಕ್ರಿಕೆಟಿಗ ಶುಭಮನ್ ಗಿಲ್

kantara 5

ತಹಶೀಲ್ದಾರ್ ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಇತ್ತೀಚೆಗೆ ವೈರಲ್ ಆಗಿರುವ ಕಾಂತಾರ ಸಿನಿಮಾದ ವೇಷ ಹಾಕಿ ಬಂದಿದ್ದರು. ಅವರನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿಯಾಗಿದ್ದಲ್ಲದೇ ತಹಶೀಲ್ದಾರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *