ಧಾರವಾಡ: ಚುನಾವಣೆ (Election) ಗೂ ಮುನ್ನವೇ ಧಾರವಾಡ ಜಿಲ್ಲೆಯಲ್ಲಿ ಕುಕ್ಕರ್ ರಾಜಕೀಯ (Cooker Politics) ಬಲುಜೋರಾಗಿ ನಡೆಯುತ್ತಿದೆ.
ಚುನಾವಣೆ ಇನ್ನೂ ಆರು ತಿಂಗಳು ಇರುವ ಮುನ್ನವೇ ಕಲಘಟಗಿ ವಿಧಾನ ಸಭಾ ಕ್ಷೇತ್ರ (Kalagatagi Vidhanasabha Constituency) ದ ಜನರಿಗೆ ಬಂಪರ್ ಗಿಫ್ಟ್ ಆಮಿಷ ಒಡ್ಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿಯವರು ಟಿಕೆಟ್ ಫಿಕ್ಸ್ ಆಗದೆಯೇ ಚುನಾವಣೆ ರಣಕಳಹೆ ಮೊಳಗಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರಮುಖ ಸಮಾಜಕ್ಕೊಬ್ಬ ಡಿಸಿಎಂ: ಶಾಸಕ ವೆಂಕಟರಾವ್ ನಾಡಗೌಡ
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಡಿಕೆ ಶಿವಕುಮಾರ್ (DK Shivakumar) ಪರಮ ಆಪ್ತವಾಗಿರುವ ನಾಗರಾಜ್ ಛಬ್ಬಿ ಅವರು ಕಲಘಟಗಿ ಟಿಕೆಟ್ ಗಾಗಿ ಮಾಜಿ ಶಾಸಕ ಸಂತೋಷ್ ಲಾಡ್ (Santhosh Lad0 ಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಛಬ್ಬಿ ಮತ್ತು ಕುಟುಂಬಸ್ಥರು ಕಲಘಟಗಿ ಕ್ಷೇತ್ರದ ಎಲ್ಲಾ ಮನೆಗಳಿಗೆ 80 ಸಾವಿರ ಕುಕ್ಕರ್ ಹಂಚಿಕೆ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ಕಲಘಟಗಿ ತಾಲೂಕಿನ ಹಿರೇ ಹೊನ್ನಳ್ಳಿ ಗ್ರಾಮದಿಂದ ಕುಕ್ಕರ್ ಹಂಚಿಕೆ ಕಾರ್ಯ ಈಗಾಗಲೇ ಆರಂಭ ಮಾಡಿದ್ದಾರೆ. ಈ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಕುಕ್ಕರ್ ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.