ರಾಯಚೂರು: ಜೆಡಿಎಸ್ (JDS) ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜಕ್ಕೊಬ್ಬ ಉಪಮುಖ್ಯಮಂತ್ರಿ ಮಾಡಲು ರಾಜ್ಯ ಜೆಡಿಎಸ್ ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದೆ ತೀರ್ಮಾನ ಆಗುತ್ತೆ ಅಂತ ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ (Venkat Rao Nadagauda) ಹೇಳಿದ್ದಾರೆ.
Advertisement
ರಾಯಚೂರಿನ ಸಿಂಧನೂರಿನಲ್ಲಿ ನಾಡಗೌಡರ ನಡೆ ಸಾಧನೆಕಡೆ ಕಾರ್ಯಕ್ರಮ ವೇಳೆ ಮಾತನಾಡಿದ ನಾಡಗೌಡ, 2023ರ ಚುನಾವಣೆಯಲ್ಲಿನ ಜೆಡಿಎಸ್ ರಣತಂತ್ರವನ್ನ ಬಿಚ್ಚಿಟ್ಟಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಪ್ರಮುಖ ಸಮಾಜಗಳ ನಾಲ್ಕು- ಐದು ಉಪಮುಖ್ಯಮಂತ್ರಿಗಳನ್ನ ಮಾಡಲಾಗುತ್ತದೆ ಎಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಪ್ರಮುಖ ಸಮಾಜಗಳಿಗೆ ಅವಕಾಶ ಕೊಟ್ಟಿರುವ ಹಾಗೆ ಇಲ್ಲಿಯೂ ಕೊಡಬೇಕು ಎಂದರು. ಇದನ್ನೂ ಓದಿ: 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲುವು ಖಚಿತ – ನಜೀರ್ ಅಹಮದ್
Advertisement
Advertisement
ಸಿಎಂ ಇಬ್ರಾಹಿಂ (CM Ibrahim) ಪಕ್ಷಕ್ಕೆ ಬಂದಿರುವುದರಿಂದ ಅಲ್ಪಸಂಖ್ಯಾತರಲ್ಲಿ ಬದಲಾವಣೆ ಆಗಿದೆ. ಸಿಎಂ ಇಬ್ರಾಹಿಂ ಕೇವಲ ಮುಸಲ್ಮಾನರಿಗೆ ಅಷ್ಟೇ ಸೀಮಿತ ಅಲ್ಲ, ವೀರಶೈವ ಸಮಾಜದ ಸ್ವಾಮೀಜಿಗಳು ಅವರನ್ನು ಇಷ್ಟಪಡುತ್ತಾರೆ. ಪ್ರಮುಖ ಸಮಾಜಗಳಿಗೆ ಡಿಸಿಎಂ ಹುದ್ದೆ ಕೊಡಬೇಕೆಂದು ಮಾತುಕತೆಗಳು ನಡೆದಿವೆ ಮುಂದೆ ತೀರ್ಮಾನವಾಗುತ್ತೆ ಅಂತ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.