Bengaluru CityDistrictsKarnatakaLatestLeading NewsMain Post

224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲುವು ಖಚಿತ – ನಜೀರ್ ಅಹಮದ್

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸಿದ್ದರಾಮಯ್ಯ (Siddaramaiah) ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ತಾರೆ ಅಂತ ವಿಧಾನ ಪರಿಷತ್ ಸದಸ್ಯ (MLC) ನಜೀರ್ ಅಹಮದ್ (Nazeer Ahmed) ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ (Kolar Constituency) ಮಾಡೋ ವಿಚಾರಕ್ಕೆ ಸಿದ್ದರಾಮಯ್ಯ ನಿವಾಸದಲ್ಲಿ ಮಾತನಾಡಿದ ಅವರು, 2023ರಲ್ಲಿ ಕೋಲಾರದಿಂದ ಸ್ಪರ್ಧೆ ಮಾಡೋ ಬಗ್ಗೆ ಸಿದ್ದರಾಮಯ್ಯ, ಹೈಕಮಾಂಡ್‌ರನ್ನ ಕೇಳಬೇಕು. ನಾವು ಸ್ಪರ್ಧೆ ಮಾಡಿ ಅಂತ ಸಿದ್ದರಾಮಯ್ಯ ಅವರಿಗೆ ಕೇಳಿದ್ದೇವೆ. 6 ತಿಂಗಳಿಂದ ನಾವು ಕೆಲಸ ಮಾಡ್ತಿದ್ದೇವೆ ಅಂತ ತಿಳಿಸಿದರು. ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಭಜರಂಗಸೇನೆಯ ರಾಜ್ಯಾಧ್ಯಕ್ಷ

ಕೋಲಾರದಲ್ಲಿ (Kolar) ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಅವರು ಬಾದಾಮಿ ಜನರ ಕೇಳಿ ತೀರ್ಮಾನ ಮಾಡ್ತೀನಿ ಅಂತ ಹೇಳಿದ್ದಾರೆ. ಅವರು ಇನ್ನೂ ಬಾದಾಮಿಯಲ್ಲಿ ಸಭೆ ಮಾಡಿಲ್ಲ. ಸಭೆ ಮಾಡಿದ ಬಳಿಕ ತೀರ್ಮಾನ ಮಾಡ್ತಾರೆ. ಅಂತಿಮವಾಗಿ ಯಾವ ಕ್ಷೇತ್ರ ಅಂತ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ನಾವು ಸ್ವಾಗತ ಮಾಡ್ತೀವಿ ಎಂದರು. ಇದನ್ನೂ ಓದಿ: ಪತಿಯನ್ನು ಕೊಲೆ ಮಾಡಿದ್ರೆ ಮಾತ್ರ ನನ್ನೊಂದಿಗೆ ಮಲಗು- ಗಂಡಸ್ತನಕ್ಕೆ ಸವಾಲ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

ಸಹಜವಾಗಿ ಪ್ರತಿ ಚುನಾವಣೆಗಳಲ್ಲಿ (Elections) ಯಾವುದೇ ಪಕ್ಷದವರು ಚುನಾವಣೆ ಪ್ರಚಾರ ಪ್ರಾರಂಭ ಮಾಡಬೇಕಾದರೂ ಕೋಲಾರದಿಂದ ಮಾಡ್ತಾರೆ. ಸಿದ್ದರಾಮಯ್ಯ ಅಹಿಂದ ಮಾಡೋವಾಗಲೂ ಕೋಲಾರದಲ್ಲಿ ಪ್ರಾರಂಭ ಮಾಡಿದ್ರು. 2023ರ ಚುನಾವಣೆಗೆ ಈಗ ಸಿದ್ದರಾಮಯ್ಯ ಕೋಲಾರದಿಂದ ಪ್ರಚಾರ ಪ್ರಾರಂಭ ಮಾಡ್ತಿದ್ದಾರೆ ಅಂತ ತಿಳಿಸಿದರು.

ಸಿದ್ದರಾಮಯ್ಯ ಮಾಸ್ ಲೀಡರ್. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರು ಗೆಲ್ತಾರೆ. 224 ಕ್ಷೇತ್ರದಲ್ಲಿ ಎಲ್ಲೇ ನಿಂತರೂ ಸಿದ್ದರಾಮಯ್ಯ ಗೆಲ್ತಾರೆ ಅಂತ ತಿಳಿಸಿದರು.

Live Tv

Leave a Reply

Your email address will not be published. Required fields are marked *

Back to top button