ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಗರಂ ಆಗಿದ್ದಾರೆ.
ಮಠ ಸಿನಿಮಾದ ಬಗ್ಗೆ ಮಾತನಾಡಿರುವ ರಿಷಿ ಕುಮಾರ್ ಸ್ವಾಮೀಜಿ, ನಿರ್ದೇಶಕನ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ‘ತಾಕತ್ತು ಇದ್ದರೆ ಹಿಂದೂ ಗುರುಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಚರ್ಚೆ ಫಾದರ್ ಗಳ ಬಗ್ಗೆ ಚಿತ್ರ ಮಾಡಲಿ. ಇವರಿಗೆ ಹಿಂದೂ ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮಠ ಸಿನಿಮಾದಲ್ಲಿ ಏನೆಲ್ಲ ಆವಾಂತರಗಳು ಆಗಿವೆ ನ್ನುವುದನ್ನು ಬಲ್ಲೆ ಎಂದದ್ದಾರೆ. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು
- Advertisement
- Advertisement
‘ಮೌಲಿಗಳ ಬಗ್ಗೆ ಸಿನಿಮಾ ಮಾಡಲಿ ಚರ್ಚ್ ಫಾದರ್ ಗಳ ಬಗ್ಗೆ ಸಿನಿಮಾ ಮಾಡಲಿ. ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ. ಈ ಸಿನಿಮಾ ರಿಲೀಸ್ ಆಗದಂತೆ ನೋಡಿ ಕೊಳ್ಳಿ ಅಂತ ಸ್ವಾಮಿಜಿಗಳಿಗೆ ರಿಷಿಕುಮಾರ್ ಮನವಿ ಮಾಡಿದ್ದಾರೆ. ಮಠ ಸಿನಿಮಾನ ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಸಲಹೆ ನೀಡಿದ್ದಾರೆ. ಹಿಂದು ಮಠ ಹಿಂದು ಸ್ವಾಮಿಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗ್ತಿದೆ. ಲಾವಿದರ ಮೂಲಕ ಮಠಗಳ ಬಗ್ಗೆ ತಪ್ಪು ಹೇಳಿಕೆಗಳನ್ನ ಹೇಳಿಸ್ತಿದ್ದಾರೆ. ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ’ ಅಂತ ರಿಷಿಕುಮಾರ್ ಸ್ವಾಮೀಜಿ ಹೇಳಕೆ ನೀಡಿದ್ದಾರೆ.