ಗುಜರಾತ್ ಸೇತುವೆ ಕುಸಿತ – ಇಂದು ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ

Public TV
1 Min Read
nadrendra modi morbi bridge

ನವದೆಹಲಿ: ಗುಜರಾತ್‌ನ (Gujarat) ಮೊರ್ಬಿಯಲ್ಲಿ (Morbi Bridge Collapse) ಹಳೆಯ ತೂಗು ಸೇತುವೆ ಕುಸಿದು 135 ಜನರ ಸಾವಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ‌. ಜೊತೆಗೆ ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಇಂದು ಮಧ್ಯಾಹ್ನ 3:45ಕ್ಕೆ ಅಪಘಾತ ಸಂಭವಿಸಿದ ಮೊರ್ಬಿ ಸೇತುವೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಮೊರ್ಬಿ ಸಿವಿಲ್ ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದು, ಸಂಜೆ 4:15ಕ್ಕೆ ಎಸ್ಪಿ ಕಚೇರಿಗೆ ತೆರಳಲಿದ್ದಾರೆ. ಇದನ್ನೂ ಓದಿ: ಮೊರ್ಬಿ ತೂಗು ಸೇತುವೆ ದುರಂತ – ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ

Gujarat Bridge

ಅವರ ಇಂದಿನ ಬೇರೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ಪ್ರಧಾನಿಗಳ ಗುಜರಾತ್ ಭೇಟಿಯನ್ನು ಪ್ರಧಾನಿ ಕಾರ್ಯಲಯ ಖಚಿತಪಡಿಸಿದೆ. ಈ ಹಿಂದೆ ಮೃತರ ಕುಟುಂಬಗಳಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದ ಅವರು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿದ್ದರು.

ಗುಜರಾತ್‌ನ ಮೊರ್ಬಿ ನಗರದಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ಹಳೆಯದಾದ ತೂಗು ಸೇತುವೆ ಕಟ್ಟಲಾಗಿತ್ತು. ಶತಮಾನಗಳಷ್ಟು ಹಳೆತಾದ ಈ ಸೇತುವೆ ನವೀಕರಣಗೊಂಡ ಮೂರು ದಿನಗಳಿಗೆ ಅಂದರೆ ಭಾನುವಾರ ಸಂಜೆ ಕುಸಿದು 135 ಜನರು ಸಾವನ್ನಪ್ಪಿದರು. ಇದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಮೃತರಾಗಿದ್ದಾರೆ. ಸೇತುವೆ ಮೇಲೆ ಅಗತ್ಯಕ್ಕಿಂತ ಹೆಚ್ಚು ಜನರು ಕಿಕ್ಕಿರಿದು ತುಂಬಿದ್ದರು. ಅತಿಯಾದ ಭಾರ ಮತ್ತು ನೂಕುನುಗ್ಗಲು ಉಂಟಾದ ಹಿನ್ನೆಲೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಗುಜರಾತ್‍ನ ಮೋರ್ಬಿ ದುರಂತ- ಉತ್ತರವಿಲ್ಲದ ಐದು ಪ್ರಶ್ನೆಗಳು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *