Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಮಲ್ಲೇಶ್ವರಂ ಮಾದರಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ: ಬೊಮ್ಮಾಯಿ

Public TV
Last updated: October 29, 2022 4:56 pm
Public TV
Share
3 Min Read
basavaraj bommai school
SHARE

ಬೆಂಗಳೂರು: ಆಧುನಿಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಲ್ಲೇಶ್ವರಂ ಮಾದರಿಯನ್ನು ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಇರುವ ಸರ್ಕಾರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಲ್ಲೇಶ್ವರಂ ಸ್ಕೂಲ್ ಮಾಡೆಲ್ ಹಾಗೂ ಪುನೀತ್ ಸ್ಯಾಟ್‌ಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

bommai school

ಮಲ್ಲೇಶ್ವರಂ ಮಾದರಿ ಶಾಲೆಯಲ್ಲಿ ಮಕ್ಕಳೇ ತಯಾರಿಸಿರುವ ಸ್ಯಾಟ್‌ಲೈಟ್ ಇಂದು ಅನಾವರಣವಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಆಗಿದ್ದು, ಬಹಳ ಯೋಗ್ಯ ವ್ಯಕ್ತಿಯ ಹೆಸರಿನಲ್ಲಿ ಕೆಲಸವಾಗುತ್ತಿದೆ ಎಂದರು.

ಆಕಾಶದೆತ್ತರಕ್ಕೆ ಮಲ್ಲೇಶ್ವರಂ ಶಾಲೆಯ ಖ್ಯಾತಿ ಏರಲಿ
ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಸಮರ್ಪಣೆ ಮಾಡುವ ರೀತಿಯಲ್ಲಿ ಈ ಸ್ಯಾಟ್‌ಲೈಟ್‌ನ್ನು ಗಗನಕ್ಕೇರಿಸುವ ಕೆಲಸ ಶ್ಲಾಘನೀಯ. ಆಕಾಶದೆತ್ತರಕ್ಕೆ ಮಲ್ಲೇಶ್ವರಂ ಶಾಲೆಯ ಖ್ಯಾತಿ ಏರಲಿ ಎಂದರು. ಪುನೀತ್ ರಾಜ್‌ಕುಮಾರ್ ಅವರು ಸದಾ ಹೊಸತನ್ನು ಹುಡುಕುವ, ಪ್ರಯೋಗಶೀಲ, ಅಂತಃಕರಣವುಳ್ಳ ವ್ಯಕ್ತಿ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಈ ಲೋಕ ಬಿಟ್ಟರೂ ಅವರು ಬದುಕಿದ ಕೆಲ ದಿನಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಭೂಮಿಯಲ್ಲಿ ಬಿಟ್ಟುಹೋಗಿದ್ದಾರೆ. ಪರೋಪಕಾರಿ ಕಾರ್ಯಗಳು, ವಿದ್ಯಾಭ್ಯಾಸ ನೀಡುವ ಸಂಸ್ಥೆ, ಅನಾಥ ಮಕ್ಕಳ ಶಕ್ತಿಧಾಮ, ಸಹಾಯ, ನಗುಮುಖದಿಂದ ಎಲ್ಲರ ದುಃಖ ದುಮ್ಮಾನಗಳನ್ನು ದೂರ ಮಾಡಿದ್ದಾರೆ. ಅವರು ನಮ್ಮ ಜೊತೆಗೆ ಎಂದಿಗೂ ಇರುತ್ತಾರೆ. ರಾಜ್ಯದ ಉದ್ದಗಲಕ್ಕೂ ಅವರ ಖ್ಯಾತಿ ಪಸರಿಸಿದೆ. ಮಲ್ಲೇಶ್ವರಂ ಶಾಲೆ ಪುನೀತ್ ಖ್ಯಾತಿಯನ್ನು ಸ್ಯಾಟ್‌ಲೈಟ್ ಮೂಲಕ ಆಕಾಶದೆತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

puneeth satellite

ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಮೌಲ್ಯ
ಶಿಕ್ಷಣ ಬಹಳ ಮುಖ್ಯ. 21 ನೇ ಶತಮಾನ ಜ್ಞಾನದ ಶತಮಾನ. ಜ್ಞಾನಾರ್ಜನೆ ಬಹಳ ಮುಖ್ಯವಾಗುತ್ತದೆ. ಕಲಿಯುವಾಗ ಗುಣಾತ್ಮಕ ಹಾಗೂ ನೈತಿಕ ವಿದ್ಯೆಯನ್ನು ಕಲಿಯಬೇಕು. ವಿಜ್ಞಾನ ಮತ್ತು ಗಣಿತವನ್ನು ಎಲ್ಲರೂ ಕಲಿಯಲೇಬೇಕು. ಎಲ್ಲರ ಜೀವನದಲ್ಲಿ ಇವು ಉಪಯೋಗಕ್ಕೆ ಬರುತ್ತವೆ. ವಿಜ್ಞಾನ ಮತ್ತು ಗಣಿತದಲ್ಲಿ ಭದ್ರ ಬುನಾದಿ ಹಾಕಲು ಭಾಷೆಯಲ್ಲಿಯೂ ಭದ್ರ ಬುನಾದಿಯನ್ನು ಹಾಕಬೇಕು. ಮಾತೃಭಾಷೆ ಸಹಜವಾಗಿ ಬರುವ ಭಾಷೆ. ಅದನ್ನು ಅಚ್ಚುಕಟ್ಟಾಗಿ ಕಲಿತರೆ ನಮ್ಮ ಜ್ಞಾನ ಉತ್ತಮಗೊಳ್ಳುತ್ತದೆ. ಪ್ರಶ್ನೆ ಕೇಳುವ ಹಕ್ಕು ಮಕ್ಕಳಿಗಿದೆ. ಮಕ್ಕಳು ಪ್ರಶ್ನೆ ಕೇಳಬೇಕು. ಶಿಕ್ಷಕರು ಕಲಿತು ಮಕ್ಕಳ ಉತ್ಸಾಹವನ್ನು ಪ್ರೋತ್ಸಾಹ ಮಾಡಬೇಕು. ಮಕ್ಕಳ ಗ್ರಹಣಶಕ್ತಿ ಹೆಚ್ಚಿರುವುದರಿಂದ ನೈತಿಕ ಮೌಲ್ಯ, ಭಾಷೆ, ವಿಜ್ಞಾನ ಹಾಗೂ ಗಣಿತವನ್ನು ಮೂಲಭೂತವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಸಬೇಕು. ಉನ್ನತ ಶಿಕ್ಷಣ ಕಲಿಯುವಾಗ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ದಂಪತಿಗೆ ಹುಲಿರಾಯನ ದರ್ಶನ

ತರ್ಕಬದ್ಧವಾಗಿ ಆಲೋಚಿಸಿ
ಮಕ್ಕಳು ತರ್ಕಬದ್ಧವಾಗಿ ಯೋಚಿಸಬೇಕು. ಯಾಕೆ, ಏನು, ಎಲ್ಲಿ ಹೇಗೆ ಎಂದು ಪ್ರಶ್ನಿಸಬೇಕು. ಆಗ ತರ್ಕಬದ್ಧವಾಗಿ ಯೋಚಿಸಬಹುದು. ಬಾಯಿಪಾಠದ ಅಗತ್ಯವಿರುವುದಿಲ್ಲ. ಈ ಪಂಚಪ್ರಶ್ನೆಗಳು ಮಕ್ಕಳ ಯಶಸ್ಸಿನ ಮೆಟ್ಟಿಲುಗಳು. ಕಠಿಣ ಗಣಿತವನ್ನು ನಾಲ್ಕು ಜನರಿಗೆ ಹೇಳಿಕೊಟ್ಟರೆ, ಅದನ್ನು ಮರೆಯುವ ಪ್ರಮೇಯವೇ ಇರುವುದಿಲ್ಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರಲ್ಲದೇ ಜ್ಞಾನ ಹಂಚಿಕೊಂಡಷ್ಟೂ ಗಟ್ಟಿಯಾದ ಜ್ಞಾನದ ಭಂಡಾರ ಉಳಿಯಲಿದೆ ಎಂದು ಸಲಹೆ ನೀಡಿದರು.

bommai 3

ಉಜ್ವಲ ಭವಿಷ್ಯ
ಮಕ್ಕಳನ್ನು ಕಂಡಾಗ ಭಾರತ ಹಾಗೂ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗಿದೆ ಎಂದು ಅನಿಸುತ್ತದೆ. ಮಕ್ಕಳಲ್ಲಿ ಉತ್ಸಾಹ, ಕುತೂಹಲ ಬಹಳ ಮುಖ್ಯ. ಮಕ್ಕಳಲ್ಲಿ ಕುತೂಹಲ ಹಾಗೂ ಮುಗ್ಧತೆ ಎರಡನ್ನೂ ಜೀವಂತವಾಗಿಡುವ ಶಿಕ್ಷಕ ನಂಬರ್ ಒನ್ ಗುರುವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸ್ಯಾಟ್‌ಲೈಟ್ ನಿರ್ಮಾಣಕ್ಕೆ ಸರ್ಕಾರದ ಸಹಾಯ
ವಿದ್ಯೆ ಶಕ್ತಿ ಮತ್ತು ಅವಕಾಶಗಳನ್ನು ನೀಡುತ್ತದೆ. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ವಿದ್ಯೆ ಕಲಿಸಿದ ವಿನಯವನ್ನು ಬಿಟ್ಟುಕೊಡಬಾರದು. ಇತರರಿಗಾಗಿ ಬದುಕಿದಾಗ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುತ್ತದೆ. ನಾಡಿನ ಭವ್ಯ ಭವಿಷ್ಯಕ್ಕೆ ತಂತ್ರಜ್ಞಾನ, ನೈತಿಕತೆ, ವಿಜ್ಞಾನ ಸಹಾಯಕ. ಶಾಲೆಗಳಲ್ಲಿ ಬಹುಪಯೋಗಿ ಸ್ಯಾಟ್‌ಲೈಟ್ ನಿರ್ಮಾಣ ಮಾಡುವ ಅವಕಾಶವಿದ್ದು, ಅಗತ್ಯವಿರುವ ತರಬೇತಿ, ವಿನ್ಯಾಸಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ: ಸಿದ್ದರಾಮಯ್ಯ

ಮಲ್ಲೇಶ್ವರಂ ಎಂಬ ಕುಟುಂಬದ ಮುಖ್ಯಸ್ಥ
ಸಚಿವ ಸಿ.ಎನ್.ಅಶ್ವಥ್ ನಾರಾಯಣ್ (C.N.Ashwath Narayan) ಅವರು ಮಲ್ಲೇಶ್ವರಂ ಎಂಬ ಕುಟುಂಬದ ಮುಖ್ಯಸ್ಥನಂತೆ ಕೆಲಸ ಮಾಡುತ್ತಿದ್ದಾರೆ. ಅಂತಃಕರಣ ಎನ್ನುವುದು ಬಹಳ ಮುಖ್ಯ. ನಮಗೆ ಹುಟ್ಟಿದ ಮಕ್ಕಳು ಮಾತ್ರ ನಮ್ಮ ಮಕ್ಕಳು ಎನ್ನುವುದು ಸಂಕುಚಿತ ಭಾವನೆ. ನನ್ನ ಕ್ಷೇತ್ರದ ಎಲ್ಲಾ ಮಕ್ಕಳೂ ನನ್ನ ಮಕ್ಕಳು ಎಂದು ತಿಳಿದು, ಆ ಮಕ್ಕಳ ಭವಿಷ್ಯಕ್ಕೆ ಶಾಲೆಗಳ ಅಭಿವೃದ್ಧಿ ಮಾಡುವುದು. ಕೇವಲ ಕಟ್ಟಡಗಳು ಮಾತ್ರವಲ್ಲ ಕಲಿಕಾ ವ್ಯವಸ್ಥೆ, ಆಧುನೀಕರಣ, ಡಿಜಿಟಲೀಕರಣ, ಅಗತ್ಯವಿರುವ ವೈಫೈ, ಬ್ರಾಡ್ ಬ್ಯಾಂಡ್ ಮುಂತಾದ ವ್ಯವಸ್ಥೆ, ಶಿಕ್ಷಕರನ್ನು ತಯಾರಿಸಿ, ಕಲಿಕೆಯಲ್ಲಿ ಆಸಕ್ತಿ ಹುಟ್ಟಿಸಿ ಮಕ್ಕಳ ಬುದ್ಧಿಶಕ್ತಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗುತ್ತಿದೆ. ಇಡೀ ರಾಜ್ಯಕ್ಕೇ ಈ ಶಾಲೆಯನ್ನು ಮಾದರಿಯಾಗಿಸಲಾಗುವುದು ಎಂದರು.

Live Tv
[brid partner=56869869 player=32851 video=960834 autoplay=true]

TAGGED:Basavaraj BommaibengaluruGovernment Schoolsmalleshwaram modelಬಸವರಾಜ ಬೊಮ್ಮಾಯಿಬೆಂಗಳೂರುಮಲ್ಲೇಶ್ವರಂ ಮಾದರಿಸರ್ಕಾರಿ ಶಾಲೆ
Share This Article
Facebook Whatsapp Whatsapp Telegram

Cinema Updates

Son of Sardaar
ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ
Bollywood Cinema Latest Top Stories
Darshan Devil 3
ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ
Cinema Latest Main Post Sandalwood
Dalapathi Vijay
ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ
Cinema Latest South cinema Top Stories
shah rukh khan small
ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ
Bollywood Cinema Latest Main Post
fish venkat
ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ
Cinema Latest South cinema Top Stories

You Might Also Like

manikrao kokate rummy game
Latest

ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

Public TV
By Public TV
1 minute ago
Karwar Tree Fall
Districts

ಕಾರವಾರ | ಕಾರಿನ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಸಾವು

Public TV
By Public TV
27 minutes ago
Dinesh Gundurao
Bengaluru City

ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

Public TV
By Public TV
37 minutes ago
Dharwad Dominos Pizza Fine
Court

ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

Public TV
By Public TV
39 minutes ago
prabhu chavan
Bidar

ನನ್ನನ್ನು ಮುಗಿಸಬೇಕು ಅಂತ ಭಗವಂತ್‌ ಖೂಬಾ ಪಿತೂರಿ ಮಾಡಿದ್ದಾರೆ: ಪ್ರಭು ಚೌಹಾಣ್‌ ಗಂಭೀರ ಆರೋಪ

Public TV
By Public TV
52 minutes ago
Ballari Traffic Police arrests young man for drinking beer on bike
Bellary

ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?