ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‍ನಲ್ಲಿ (T20 World Cup) ಫುಟ್‍ಬಾಲ್ (Football) ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅಂಪೈರ್ (Umpire) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳು ಹರಿದಾಡುತ್ತಿದೆ.
ಅಸಲಿಗೆ ಇದು ಸತ್ಯವಲ್ಲ. ಟಿ20 ವಿಶ್ವಕಪ್‍ನಲ್ಲಿ ಮೈಕೆಲ್ ಗಾಫ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಫೋಟೋ ಮೆಸ್ಸಿಯನ್ನು ಕಂಡಂತೆ ಭಾಸವಾಗುತ್ತಿದೆ. ಹಾಗಾಗಿ ಅಭಿಮಾನಿಗಳು ಮೆಸ್ಸಿ ಫುಟ್‍ಬಾಲ್ ಬಿಟ್ಟು ಟಿ20 ವಿಶ್ವಕಪ್‍ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್
ಮೈಕೆಲ್ ಗಾಫ್ ಹಲವು ವರ್ಷಗಳಿಂದ ಐಸಿಸಿಯ ಪ್ಯಾನಲ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್‍ನಲ್ಲೂ ಕೂಡ ಇದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೈಕೆಲ್ ಗಾಫ್ ಬೈಸ್ ರನ್ ಆಗಿ ಜಿಂಬಾಬ್ವೆ ತಂಡಕ್ಕೆ 5 ರನ್ ಬರುವಂತಹ ತೀರ್ಪೊಂದನ್ನು ನೀಡಿದ್ದರು. ಆ ಬಳಿಕ ಮೈಕಲ್ ಗಾಫ್ ಫೋಟೋವನ್ನು ಮೆಸ್ಸಿಗೆ ಹೋಲಿಕೆ ಮಾಡಲಾಗಿದೆ. ಇದನ್ನೂ ಓದಿ: ಭಾರತ ವಿರುದ್ಧ ಸೋಲು – ಡ್ರೆಸ್ಸಿಂಗ್ ರೂಮ್‍ನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು
Is it just me, or does anyone else think that the umpire here looks like Messi? ????#T20WorldCup2022 pic.twitter.com/wBLu67FHZp
— Prashant Bhansali (@prashant280294) October 24, 2022
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‍ನ ಪ್ರತಿಯೊಂದು ಪಂದ್ಯಗಳು ರೋಚಕವಾಗಿ ಕಾಣಸಿಗುತ್ತಿದೆ. ಜೊತೆಗೆ ಪಂದ್ಯಕ್ಕೆ ವರುಣನ ಕಾಟ ಕೂಡ ಕಾಡುತ್ತಿದೆ. ಈ ನಡುವೆ ಸೂಪರ್ 12 ಹಂತದ ಪಂದ್ಯಗಳು ಸಾಗುತ್ತಿವೆ.