ಮೆಲ್ಬರ್ನ್: ಟಿ20 ವಿಶ್ವಕಪ್‍ನ (T20 World Cup) ಮೊದಲ ಪಂದ್ಯದಲ್ಲಿ ಭಾರತ (India) ವಿರುದ್ಧ ವಿರೋಚಿತ ಸೋಲು ಕಂಡ ಪಾಕಿಸ್ತಾನ (Pakistan) ತಂಡದ ಆಟಗಾರರು ಡ್ರೆಸ್ಸಿಂಗ್ ರೂಮ್‍ನಲ್ಲಿ (Dressing Room) ತಲೆ ಮೇಲೆ ಕೈ ಹೊತ್ತು ಕುಳಿತಿರುವ ವೀಡಿಯೋ ವೈರಲ್ ಆಗುತ್ತಿದೆ.
Advertisement
ರಣ ರೋಚಕ ಪಂದ್ಯದಲ್ಲಿ ಪ್ರತಿ ಕ್ಷಣ ಎದೆಬಡಿತ ಹೆಡಚ್ಚಿಸಿದ್ದ ಪಂದ್ಯದಲ್ಲಿ ಹಲವು ಹೈಡ್ರಾಮಾಗಳ ನಡುವೆ ಕಡೆಗೆ ಭಾರತ ತಂಡ 4 ವಿಕೆಟ್‍ಗಳ ರೋಚಕ ಜಯ ಸಾಧಿಸಿತು. ಇತ್ತ ಪಾಕಿಸ್ತಾನ ಕ್ರಿಕೆಟಿಗರು ಕೊನೆಯ ವರೆಗೂ ಹೋರಾಡಿ ಪಂದ್ಯದಲ್ಲಿ ಜಯ ಸಾಧಿಸಲಾಗದೆ ನಿರಾಸೆ ಅನುಭವಿಸಿದರು. ಇದನ್ನೂ ಓದಿ: ಭಾರತ-ಪಾಕ್ ಪಂದ್ಯದಲ್ಲಿ ಕಾಂಟ್ರವರ್ಸಿ – ಗೆಲುವಿನ ಬಳಿಕ ಅಗ್ರೇಸ್ಸಿವ್ ಮೂಡ್‍ನಲ್ಲಿ ದ್ರಾವಿಡ್
Advertisement
Advertisement
ಭಾರತ ಪರ ಕಿಂಗ್ ಕೊಹ್ಲಿ (Virat Kohli) ಚೇಸಿಂಗ್ ಮಾಸ್ಟರ್ ಆಗಿ ಘರ್ಜಿಸಿದರು. ಕೊನೆಯ ವರೆಗೆ ಗೆಲುವಿಗಾಗಿ ಶತಾಯ ಗತಾಯ ಹೋರಾಡಿದ ಕೊಹ್ಲಿ, ಇನ್ನಿಂಗ್ಸ್ ಕಂಡು ವಿಶ್ವ ಕ್ರಿಕೆಟ್ ಅಭಿಮಾನಿಗಳು ಮನಸೋತಿದ್ದಾರೆ. ಸ್ವತಃ ಪಾಕಿಸ್ತಾನ ತಂಡದ ಆಟಗಾರರು ಕೊಹ್ಲಿ ಆಟವನ್ನು ಹಾಡಿ ಹೊಗಳಿದ್ದಾರೆ. ಕೊಹ್ಲಿಯ ಅಜೇಯ 82 ರನ್ (53 ಎಸೆತ, 6 ಬೌಂಡರಿ, 4 ಸಿಕ್ಸ್) ಚಚ್ಚಿದ ಪರಿ ಪಾಕ್ ಬೌಲರ್‌ಗಳಿಗೆ ನಿದ್ದೆಯಲ್ಲೂ ಕಾಡುವಂತಾಗಿಸಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಸೂಪರ್; `ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್
Advertisement
“You are my match-winner”
Babar Azam’s inspirational dressing room speech after Pakistan’s heartbreaking loss at the MCG ????????????
????: @TheRealPCB#T20WorldCup | #INDvPAK pic.twitter.com/TwvV536REk
— ICC (@ICC) October 23, 2022
ಭಾರತ ತಂಡ ಗೆಲುವು ಸಾಧಿಸಿದ ಬಳಿಕ ಮೆಲ್ಬರ್ನ್ (Melbourne) ಡ್ರೆಸ್ಸಿಂಗ್ ರೂಮ್‍ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಮತ್ತು ಮೆಂಟರ್ ಮ್ಯಾಥ್ಯೂ ಹೇಡನ್ ಪಾಕಿಸ್ತಾನ ತಂಡದ ಪ್ರದರ್ಶನದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತ ಇವರಿಬ್ಬರೂ ತಮ್ಮ ತಂಡದ ತಪ್ಪುಗಳನ್ನು ಹೇಳುತ್ತಿದ್ದಂತೆ ಪಾಕ್ ಆಟಗಾರರು ತಲೆಗೆ ಕೈ ಹೊತ್ತು ಕುಳಿತು ಬೇಸರದಿಂದ ಕೇಳ ತೊಡಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.