ನಾಗ್ಪುರ- ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರವೇ ಸಂಚಾರಕ್ಕೆ ಮುಕ್ತ – ವಾಹನಗಳಿಗೆ 120 kmph ವೇಗದ ಮಿತಿ ನಿಗದಿ

Public TV
1 Min Read
Mumbai Nagpur Samruddhi Expressway 2

ಮುಂಬೈ: ಮಹಾರಾಷ್ಟ್ರ ರಾಜ್ಯದ ಮಹತ್ವಾಕಾಂಕ್ಷೆಯ ಮುಂಬೈ- ನಾಗ್ಪುರ ಸಂಮೃದ್ಧಿ ಎಕ್ಸ್‌ಪ್ರೆಸ್‌ನಲ್ಲಿ(Mumbai-Nagpur Samruddhi Expressway) ಸಂಚರಿಸುವ ವಾಹನಗಳಿಗೆ ಗಂಟೆಗೆ 120 ಕಿ.ಮೀ(120 kmph) ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ.

701 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಿಂದಿನ ಯೋಜನೆಯಂತೆ, ಈ ಹೆದ್ದಾರಿಯನ್ನು ಡಿಸೆಂಬರ್ 2021 ರಲ್ಲೇ ಲೋಕಾರ್ಪಣೆಯಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ಉದ್ಘಾಟನೆ ವಿಳಂಬವಾಗುತ್ತಿದೆ. ಇದೀಗ ಮಹಾರಾಷ್ಟ್ರ(Maharashtra) ಸರ್ಕಾರದಿಂದ ವೇಗದ ಮಿತಿ ನಿಗದಿ ಮಾಡಿದ್ದು, ಶೀಘ್ರವೇ ಈ ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

Mumbai Nagpur Samruddhi Expressway 1

ಈ ಹೆದ್ದಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ನಿರ್ಮಿಸಿದೆ. 150 kmph ವೇಗದ ಮಿತಿಯೊಂದಿಗೆ ಹೆದ್ದಾರಿಯ ಮಾನದಂಡಗಳ ಪ್ರಕಾರ, ಅವಶ್ಯಕತೆಗಳನ್ನು ಪೂರೈಸಲಾಗಿದೆ.

ಹಾಲಿ ಉಪಮುಖ್ಯಮಂತ್ರಿ, ಮಾಜಿ ಸಿಎಂ ಆಗಿರುವ ದೇವೇಂದ್ರ ಫಡ್ನವೀಸ್‌ ಅವರ ಕನಸಿನ ಯೋಜನೆ ಇದಾಗಿದ್ದು, 2016ರ ಸಮಗ್ರ ಯೋಜನಾ ವರದಿ ಸಲ್ಲಿಕೆಯಾದ ಬಳಿಕ 2017ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿತ್ತು. 2018ರ ಡಿಸೆಂಬರ್‌ನಲ್ಲಿ ರಸ್ತೆ ನಿರ್ಮಾಣದ ಕೆಲಸ ಆರಂಭವಾಗಿತ್ತು. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

devendra FADNAVIS 2

 

ವಾಹನಗಳಿಗೆ ಮಿತಿ ಎಷ್ಟು?
ಕಾರು ಸೇರಿದಂತೆ ಗರಿಷ್ಠ 8 ಪ್ರಯಾಣಿಕರನ್ನು ಸಾಗಿಸುವ ಪ್ರಯಾಣಿಕ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 120 kmph ವೇಗದ ಮಿತಿ. ಘಾಟ್‌ ಮತ್ತು ಸುರಂಗದಲ್ಲಿ  100 kmph.

ವ್ಯಾನ್‌, ಬಸ್‌ ಸೇರಿದಂತೆ 9 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 100 kmph. ಘಾಟ್‌ ಮತ್ತು ಸುರಂಗದಲ್ಲಿ 80 kmph.

ಟ್ರಕ್‌, ಲಾರಿ ಸರಕುಗಳನ್ನು ಸಾಗಿಸುವ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 80 kmph.

ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳ ರಿಕ್ಷಾಗಳು ಮತ್ತು ತ್ರಿಚಕ್ರ ವಾಹನಗಳಿಗೆ ಈ ರಸ್ತೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *