ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕರಾಟೆ ಚಾಂಪಿಯನ್‍ಶಿಪ್ 2022ರಲ್ಲಿ (Commonwealth Karate Championship 2022) ಬೆಂಗಳೂರಿನ ಜಾಗೃತ್ ಮತ್ತು ಸಂಭ್ರಮ ಚಿನ್ನದ ಪದಕ ಗೆದ್ದಿದ್ದಾರೆ.
ಎಡಿಜಿಪಿ ಉಮೇಶ್ ಅವರ ಪಿಎ ಇಒಡಬ್ಲ್ಯೂ, (PA to ADGP EOW) ಹೇಮಲತಾ ಅವರ ಮಕ್ಕಳಾದ ಜಾಗೃತ್ ಮತ್ತು ಸಂಭ್ರಮ ಕಾಮನ್‍ವೆಲ್ತ್ ಕರಾಟೆ ಚಾಂಪಿಯನ್‍ಶಿಪ್ 2022ರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರೆ, ಜಾಗೃತ್ ಕುಮಿಟೆ ಚಾಂಪಿಯನ್‍ಶಿಪ್‍ನಲ್ಲೂ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು
ಸಂಭ್ರಮ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ, ಕುಮಿಟೆ ಕ್ಲಬ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಈ ಮೂಲಕ ದೇಶಕ್ಕೆ ಒಟ್ಟು 4 ಪದಕವನ್ನು ಗೆದ್ದು ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ