ರಸ್ತೆ ಬದಿಯಲ್ಲಿದ್ದ ಅಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಫುಟ್‍ಪಾತ್ ಕುಸಿದು ವ್ಯಕ್ತಿಯೊಬ್ಬರು ಕೂದಲೆಳೆಯ ಅಮತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
I’m going to spend the weekend trying to figure out what message the Universe was sending this man. What would you be thinking if you were him? pic.twitter.com/U55PDCZPry
— anand mahindra (@anandmahindra) August 5, 2022
ಈ ವೀಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ, ನಾನು ಈ ವಾರಾಂತ್ಯದಲ್ಲಿ ಜಗತ್ತು ಈ ವ್ಯಕ್ತಿಗೆ ಯಾವ ಸಂದೇಶವನ್ನು ನೀಡಬಹುದು ಎಂಬುವುದರ ಬಗ್ಗೆ ಆಲೋಚಿಸುತ್ತಿದ್ದೇನೆ. ನೀವು ಈ ವ್ಯಕ್ತಿಯ ಜಾಗದಲ್ಲಿದ್ದರೆ, ನಿಮ್ಮ ಆಲೋಚನೆ ಏನಿರುತ್ತಿತ್ತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನನೂ ಓದಿ: ಗಲ್ಲು ಶಿಕ್ಷೆ ಕಾನೂನಿನ ಬಳಿಕ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ: ಗೆಹ್ಲೋಟ್
30 ಸೆಕೆಂಡ್ ಇರುವ ಈ ವೀಡಿಯೋ ಅಂಗಡಿಯೊಂದರ ಹೊರಗಿರುವ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ರಸ್ತೆ ಬದಿ ಇದ್ದ ಅಂಗಡಿಯ ಕಡೆಗೆ ವ್ಯಕ್ತಿ ನಡೆಯುತ್ತಾ ಬರುತ್ತಿದ್ದಂತೆ ಫುಟ್‍ಪಾತ್ ಕುಸಿಯುತ್ತದೆ. ಇದನ್ನು ತಿಳಿಯದೇ ವ್ಯಕ್ತಿ ಅಂಗಡಿಯ ಕಡೆಗೆ ಒಂದು ಹೆಜ್ಜೆ ಇಡುತ್ತಿದ್ದಂತೆಯೇ ಫುಟ್‍ಪಾತ್ ಕುಸಿದಿರುವುದನ್ನು ಗಮನಿಸಿ ವ್ಯಕ್ತಿಯೇ ತಾವು ಪ್ರಾಣಾಯದಿಂದ ಪಾರಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಈ ದೃಶ್ಯವನ್ನು ಗಮನಿಸಿ ಅಂಗಡಿಗಳ ಒಳಗಿದ್ದವರೆಲ್ಲರೂ ಹೊರಗೆ ಬಂದು ನಿಲ್ಲುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು