ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು

Public TV
2 Min Read
Chamundeshwari Dasara Mysore Madikeri Mawta 5

ಮಡಿಕೇರಿ: ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಾರೆ. ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ ಇಡೀ ಮೈಸೂರು ನಗರವೇ ಸಿಂಗರಿಸಿಕೊಳ್ಳುತ್ತದೆ. ಜಂಬೂಸವಾರಿ ಸಾಗುವ ರಾಜಮಾರ್ಗ ಅಲ್ಲದೇ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಅದ್ರೇ ಈ ಬಾರೀ ದಸರಾಕ್ಕೆ ಜಂಬೂಸವಾರಿ ಇಲ್ಲದೇ ದಸರಾ ಉತ್ಸವ ನಡೆಯುತ್ತೋ ಅನ್ನೋ ಅನುಮಾನ ಕಾಡತೋಡಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಹತ್ತಾರು ವಿಷಯಗಳು ನಮ್ಮ ಕಣ್ಣಮುಂದೆ ಬರುತ್ತವೆ. 10 ದಿನಗಳ ಕಾಲ ಝಗಮಗಿಸುವ ಮೈಸೂರು ಅರಮನೆ, ಸಂಪ್ರದಾಯ-ಆಚರಣೆಗಳು, ಸಾಂಸ್ಕøತಿಕ ವೈಭವ…. ಹೀಗೆ ವರ್ಣಿಸಲು ಪದಗಳೇ ಇಲ್ಲ. ಅವೆಲ್ಲಕ್ಕಿಂತ ಮುಖ್ಯವಾದದ್ದು, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಭಿಮನ್ಯು ಆನೆ, ಗಾಂಭೀರ್ಯ ನಡಿಗೆ ಹಾಕಿ ರೋಮಾಂಚನಗೊಳಿಸುವ ದಿನಗಳು ಹತ್ತಿರವಾಗುತ್ತಿದೆ.

Chamundeshwari Dasara Mysore Madikeri Mawta 1

ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಭಿಮನ್ಯು, ಅವನ ಅಕ್ಕಪಕ್ಕದಲ್ಲಿ ನಿಲ್ಲುವ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಹಾಗೂ ಇತರೆ ಒಟ್ಟು 8 ಆನೆಗಳು ದಸರಾಕ್ಕೆ ಬರಲು ಹಾಗೂ ತಾಲೀಮು ನಡೆಸಲು ಈಗಾಗಲೇ ಸಿದ್ಧತೆ ಕಾರ್ಯವನ್ನು ಸರ್ಕಾರ ಮಾಡಲು ಹೋರಟಿದೆ. ಅದ್ರೆ ಈ ಬಾರಿ ದಸರಾಕ್ಕೆ ಎಲ್ಲಾ ಪೂರ್ವ ತಯಾರಿ ನಡೆಸುತ್ತಿರುವಾಗಲ್ಲೇ ಸಾಕಾನೆ ಮಾವುತ ಹಾಗೂ ಕಾವಾಡಿಗಳು ದಸರಾಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್‌ಗೆ ಭಾರತದಲ್ಲಿ ಮೊದಲ ಬಲಿ 

Chamundeshwari Dasara Mysore Madikeri Mawta 2

ಅಷ್ಟಕ್ಕೂ ಯಾಕೆ ಅಂತ ನೋಡಿದ್ರೆ, ದಶಕಗಳಿಂದ ವೇತನ ತಾರತಮ್ಯ ವಿವಿಧ ಬೇಡಿಕೆ ಇರುವುದರಿಂದ ಈ ಬಾರಿ ಗಜಪಡೆಗಳ ಜೊತೆ ಮೈಸೂರಿಗೆ ಬರುವ ಮಾವುತ ಕಾವಡಿಗಳು ದಸರಾವನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

Chamundeshwari Dasara Mysore Madikeri Mawta 3

ಕೊಡಗು ಆನೆಗಳ ದೊಡ್ಡ ಜನಸಂಖ್ಯೆಗೆ ನೆಲೆಯಾಗಿದ್ದು, ಇದು ಆಗಾಗ್ಗೆ ಹೆಚ್ಚಿದ ಮನುಷ್ಯ-ಆನೆ ಸಂಘರ್ಷದ ಪರಿಣಾಮವಾಗಿ ಮನುಷ್ಯರ ಸಾವು, ಆನೆಗಳಿಂದ ಆಸ್ತಿ ನಷ್ಟಕ್ಕೆ ಕಾರಣವಾಗುತ್ತದೆ. ಬುಡಕಟ್ಟು ಸಮುದಾಯದ ಮಾವುತರು ಮತ್ತು ಕಾವಡಿಗಳು ಆನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

Chamundeshwari Dasara Mysore Madikeri Mawta 4

ಮಾವುತರು ಪುಂಡಾನೆಗಳನ್ನು ಸೆರೆಹಿಡಿಯುವಲ್ಲಿ ಮತ್ತು ಅವುಗಳನ್ನು ಪಳಗಿಸುವಲ್ಲಿ, ನಿವಾಸಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಆದರೆ, ಮಾವುತರು ಮತ್ತು ಉಸ್ತುವಾರಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಅವಕಾಶವಿಲ್ಲದಿದ್ದರೂ ಮೂಲ ಸೌಕರ್ಯಗಳ ಕೊರತೆಯಿದೆ. ಹಬ್ಬದ ಸಂದರ್ಭದಲ್ಲಿ ಮೈಸೂರು ದಸರಾ ಆನೆಗಳ ಜೊತೆಗೆ ಮಾವುತರು ವಿಶೇಷ ಮನ್ನಣೆಯನ್ನು ಪಡೆದರೆ, ನಂತರ ಅವರ ಯೋಗಕ್ಷೇಮವನ್ನೂ ಕೂಡ ಯಾರೂ ವಿಚಾರಿಸುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಂತರರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ 

Chamundeshwari Dasara Mysore Madikeri Mawta

ಆನೆ ಶಿಬಿರಗಳಲ್ಲಿ ಸೌಲಭ್ಯಗಳು ಅತ್ಯಲ್ಪ. ಇದಲ್ಲದೆ, ಮಾವುತರು ಮತ್ತು ಉಸ್ತುವಾರಿಗಳ ವೇತನವನ್ನು ಹೆಚ್ಚಿಸುವಂತೆ ಒತ್ತಾಯಿಸಿ ನಾವು ಹಲವಾರು ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಆದರೆ ನಮ್ಮ ಮನವಿಗಳಿಗೆ ಯಾರೂ ಕಿವಿಗೊಡುತ್ತಿಲ್ಲ ಎಂದು ದುಬಾರೆ ಆನೆ ಶಿಬಿರ ಮಾವುತ ಮತ್ತು ಕಾವಾಡಿಗಳು ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ರಾಜ್ಯ ಮಾವುತ ಮತ್ತು ಕಾವಾಡಿ ಸಮಿತಿಯ ಸಭೆ ಇತ್ತೀಚೆಗೆ ನಡೆದಿದ್ದು, ದುಬಾರೆ, ಮತ್ತಿಗೋಡು, ಸಕ್ರೆಬೈಲ್, ರಾಂಪುರ ಸೇರಿದಂತೆ ವಿವಿಧ ಆನೆ ಶಿಬಿರಗಳ ಮಾವುತರು ಮತ್ತು ಕಾವಡಿಗಳು ದಸರಾ ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ನಾಡದೇವಿ ಚಾಮುಂಡೇಶ್ವರಿ ದಸರಾ ಆಚರಣೆಗೆ ಮಾವುತರು ಹಿಂದೆಟ್ಟು ಹಾಕುತ್ತಿದ್ದು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಇವರ ಸಮಸ್ಯೆಯನ್ನು ಬಗೆಹರಿಸುತ್ತದೆಯೋ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *