ಟಾಲಿವುಡ್‌ನ ಹಾಟ್ ಟಾಪಿಕ್ ಅಂದ್ರೆ ಸಮಂತಾ ಮತ್ತು ನಾಗಚೈತನ್ಯ ಇಂದಿಗೂ ಈ ಜೋಡಿ ಯಾಕೆ ಬೇರೆಯಾಗಿದ್ದಾರೆ ಎಂಬ ಕಾರಣ ಗೌಪ್ಯವಾಗಿಯೇ ಇದೆ. ಇದೀಗ ಕರಣ್ ಜೋಹರ್ ಶೋವೊಂದರಲ್ಲಿ ಡಿವೋರ್ಸ್ ನಂತರ ನಾಗಚೈತನ್ಯ ಮೇಲೆ ಭಾವನೆ ಹೇಗಿದೆ ಅಂತಾ ಶಾಕಿಂಗ್ ಹೇಳಿಕೆಯನ್ನ ಸಮಂತಾ ನೀಡಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಆದರೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರು ದೂರ ದೂರ ಆದರು. ಸಾಕಷ್ಟು ನೆಗೆಟಿವ್ ಟ್ರೋಲ್‌ಗಳಿಗೆ ಗುರಿಯಾಗಿದ್ದ ಸಮಂತಾಗೆ ಕರಣ್ ಜೋಹರ್ ಶೋನಲ್ಲಿ ಸಮಂತಾ ಖಾಸಗಿ ವಿಚಾರವೊಂದನ್ನು ಕೇಳಿದ್ದಾರೆ. ಪ್ರಸ್ತುತ ನಿಮ್ಮ ಮತ್ತು ನಾಗಚೈತನ್ಯ ನಡುವೆ ರಿಲೇಷನ್ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದು ಕರಣ್‌ಗೆ ಉತ್ತರಿಸಿದ್ದಾರೆ. ನಮ್ಮ ನಡುವೆ ಈಗ ಸ್ನೇಹಕ್ಕೆ ಭಾವನೆಗೆ ಜಾಗವಿಲ್ಲ ಅಂತಾ ಪರೋಕ್ಷವಾಗಿ ಸಮಂತಾ ತಿಳಿಸಿದ್ದಾರೆ. ನಾಗಚೈತನ್ಯ ಅವರನ್ನ ಕಂಡ್ರೆ ಸಮಂತಾಗೆ ಕೊಲ್ಲುವಷ್ಟು ಕೋಪವಿದ್ಯಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
ಸಮಂತಾ ಅವರನ್ನು ತುಂಬಾ ನೋಯಿಸಿದ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಯಾವುದು ಎಂದು ಕರಣ್ ಕೇಳಿದರು. ನಾಗ ಚೈತನ್ಯಗೆ ವಿಚ್ಛೇದನ ನೀಡಲು ೨೫೦ ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಮಂತಾ ಹೇಳಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು.. ಖುಷಿಯಿಂದ ನಾವು ಡಿವೋರ್ಸ್ ಪಡೆದಿಲ್ಲ. ನೋವಿನಿಂದಲೇ ದೂರ ಆಗಿದ್ದೇವೆ ಜತೆಗೆ ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]