ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನ್ನಿಸಿ ಈಶ್ವರಪ್ಪ ಸಂಭ್ರಮ

Public TV
4 Min Read
Shimoga Santosh Eshwarappa Congress BJP

-ಕಾಂಗ್ರೆಸ್‍ನಲ್ಲಿ ಇವರಿಬ್ಬರಿಗೆ ಉಗಿಯೋರು ಇಲ್ವಾ?

ಶಿವಮೊಗ್ಗ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂತೋಷ ವ್ಯಕ್ತಪಡಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆ ಅವರ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಈ ವೇಳೆ ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಮೊದಲೇ ಹೇಳಿದ್ದೆ. ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು. ಮನೆ ದೇವರಾದ ತಾಯಿ ಚೌಡೇಶ್ವರಿ ಆಶೀರ್ವಾದದಿಂದ ನಾನು ಗೆದ್ದು ಬರುತ್ತೇನೆ ಎಂದಿದ್ದೆ. ಇದೀಗ ಹಾಗೆ ಆಗಿದೆ ಎಂದರು. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ – ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಕೆ; ಈಶ್ವರಪ್ಪಗೆ ಕ್ಲೀನ್‌ ಚಿಟ್‌

santosh patil

ದೇವರು ನನ್ನ ಪರವಾಗಿರುವುದಕ್ಕೆ ಸಂತೋಷವಾಗಿದೆ. ನನ್ನಿಂದಾಗಿ ನನ್ನ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರಿಗೆ ಮುಜುಗರವಾಗಿತ್ತಲ್ಲ ಎಂಬ ನೋವಿತ್ತು. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೆ. ಸಂತೋಷ್ ಪಾಟೀಲ್ ಪತ್ನಿಗೆ ಯಾರೋ ಪ್ರಚೋದಿಸಿ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.

ಮಠಾಧೀಶರು ಕರೆ ಮಾಡಿ ಶುಭಾ ಕೋರಿದ್ರು
ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾನು ಯಾವುದೇ ಹುದ್ದೆ ಬಯಸಿಲ್ಲ. ಬಯಸುವುದೂ ಇಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಪಕ್ಷದ ಹಿರಿಯರ, ಮಠಾಧೀಶರ ಆಶೀರ್ವಾದ ನನಗೆ ಇದೆ. ಅನೇಕ ಹಿರಿಯರು ಮಠಾಧೀಶರು ನನಗೆ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ ಎಂದು ತಿಳಿಸಿದರು.  ಇದನ್ನೂ ಓದಿ: ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ 

Shimoga Santosh Eshwarappa Congress BJP 2

ಡಿಕೆಶಿ ಕ್ಷಮೆ ಕೋರಬೇಕು
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಅವರು, ಡಿಕೆಶಿ ಮೊದಲು ರಾಜ್ಯದ ಜನರ ಕ್ಷಮೆ ಕೋರಬೇಕು. ಈ ಹಿಂದೆ ವ್ಯಕ್ತಿ ಪೂಜೆ ಮಾಡಲ್ಲ, ಜಾತಿವಾದ ಮಾಡಲ್ಲ. ಎಂದಿದ್ದರು. ಆದರೆ, ಈಗ ಮುಖ್ಯಮಂತ್ರಿ ಆಗಲು ನನ್ನ ಹಿಂದೆ ಒಕ್ಕಲಿಗರು ನಿಲ್ಲಲಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಜಾತಿವಾದಿ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಈಗ ಒಕ್ಕಲಿಗರನ್ನು ಎಳೆದು ತಂದು ಡಿ.ಕೆ.ಶಿವಕುಮಾರ್ ತಾನು ಕೂಡ ಜಾತಿವಾದಿ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

DKSHIVAKUMAR AND SIDDRAMIHA

ಕಾಂಗ್ರೆಸ್ ಅವರು ಜಾತಿವಾದಿಗಳು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಒಕ್ಕಲಿಗರು ರಾಷ್ಟ್ರೀಯವಾದಿಗಳು ಎಂದು ಬಿಜೆಪಿ ಜೊತೆ ನಿಂತಿದ್ದಾರೆ. ಜಾತಿ, ಧರ್ಮ ವಿಚಾರ ನೋಡದೇ ನಮ್ಮ ಸರ್ಕಾರ ಎಲ್ಲವೂ ಮಾಡಿದೆ. ಎಸ್.ಎಂ.ಕೃಷ್ಣ ಬಳಿಕ ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದು ಕೂಡ ತಪ್ಪು. ಇದನ್ನು ಒಕ್ಕಲಿಗರು ಕೂಡ ಒಪ್ಪುವುದಿಲ್ಲ. ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರಂತಹ ವ್ಯಕ್ತಿಗಳ ರಕ್ತ ಹರಿಯುತ್ತಿರುವ ಸಮುದಾಯ ಅದು. ಜನರ ಜೊತೆಗೆ ಸ್ವತಃ ಕಾಂಗ್ರೆಸ್ ಅವರೇ ಈ ಮಾತನ್ನು ಒಪ್ಪುವುದಿಲ್ಲ ಎಂದು ಟೀಕಿಸಿದರು.

ಜಾತಿ ಧರ್ಮ ನೋಡದೇ, ಒಕ್ಕಲಿಗರು ರಾಷ್ಟ್ರೀಯತೆಗೆ ಒತ್ತು ನೀಡಿದ್ದಾರೆ. ಜಾತಿ ಅಧಾರದಲ್ಲಿ ಮತ ಕೇಳುತ್ತಾರೆ ನಾಚಿಕೆಯಾಗಬೇಕು. ಹೀಗಾಗಿ ಡಿಕೆಶಿ ಒಕ್ಕಲಿಗರ ಕ್ಷಮೆ ಕೇಳಬೇಕು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾನ್ಯಾವುದೇ ಕಾರಣಕ್ಕೂ ಜಾತಿ ವಿಚಾರ ತರಲ್ಲ ಎಂದು ಹೇಳಿದ್ದ ಅವರು ನನಗೆ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ. ಜಾತಿ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಅವರ ಪಕ್ಷದ ನಾಯಕರು ಕೂಡ ಅದನ್ನು ಖಂಡನೆ ಮಾಡಬೇಕು ಎಂದು ಹೇಳಿದರು.

SIDDU DKSHI

ಸಿದ್ದರಾಮಯ್ಯ ವಿರುದ್ಧವೂ ಮಾತನಾಡಿದ ಅವರು, ಹೈಲೈಟ್ ಆಗಿ ಮುಖ್ಯಮಂತ್ರಿ ಆಗಿದ್ದವರೇ ಈಗ ಮನೆಗೆ ಹೋದ್ರು. ಜನರು ಇವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿಲ್ವಾ? ಮುಖ್ಯಮಂತ್ರಿ ಸ್ಥಾನ ಕಿತ್ತು ಬಿಸಾಕಿಲ್ವಾ? ಇನ್ನೂ ಯಾವತ್ತೋ ಚುನಾವಣೆ ಇದೆ. ಇನ್ನೂ ಹೆಣ್ಣೆ ಹುಡುಕಿಲ್ಲ – ನಿಶ್ಚಿತಾರ್ಥ ಆಗಿಲ್ಲ. ಇನ್ನೂ ಮದುವೆನೇ ಆಗಿಲ್ಲ. ಆಗಲೇ ಮುಖ್ಯಮಂತ್ರಿ ನಾವು ಎಂದು ಇಬ್ಬರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಎರಡೂ ಜಾತಿಯವರು ಒಪ್ಪಲ್ಲ
ಮಗುವಿಗೆ ಇಬ್ಬಿಬ್ರು ಅಪ್ಪ ಆಗಲು ಸಾಧ್ಯವೇನು? ಕಾಂಗ್ರೆಸ್‍ನಲ್ಲಿ ಇವರಿಬ್ಬರಿಗೆ ಉಗಿಯೋರು ಇಲ್ವಾ? ಛೀಮಾರಿ ಹಾಕುವವರು ಇಲ್ವಾ? ಇನ್ಯಾವೊತ್ತೋ ಚುನಾವಣೆ, ಈ ರಾಜ್ಯದ ಜನ ಯಾವತ್ತೋ ಅವರನ್ನು ಸೋಲಿಸಿಯಾಗಿದೆ. ಈಗಲೇ ಜಾತಿ ಮುಂದಿಟ್ಟುಕೊಂಡು ಇವರಿಬ್ಬರು ಸಿಎಂ ಆಗಲು ಹೊರಟಿದ್ದಾರಲ್ಲ. ಕುರುಬರು, ಒಕ್ಕಲಿಗರು ಇವರಿಬ್ಬರಿಗೂ ಒಪ್ಪಿಲ್ಲ. ಯಾವುದೇ ಕಾಲಕ್ಕೂ ಇವರಿಗೆ ಎರಡೂ ಜಾತಿಯವರು ಒಪ್ಪಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:  ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್ 

Shimoga Santosh Eshwarappa Congress BJP 1

ಓಟ್ ಬರುತ್ತೆ ಎಂಬ ಭ್ರಮೆ
ರಾಜ್ಯದ ಜನ ಇವರಿಗೆ ಜಾತಿವಾದಿ ಎಂದು ಮತ್ತೊಮ್ಮೆ ಮನೆಗೆ ಕಳುಹಿಸುತ್ತಾರೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನ ನೀಡಿ ಬಿಜೆಪಿಯನ್ನೇ ಅಧಿಕಾರಕ್ಕೆ ತರ್ತಾರೆ. ಬಿಜೆಪಿಯವರೇ ಕರ್ನಾಟಕದ ಮುಖ್ಯಮಂತ್ರಿ ಆಗ್ತಾರೆ. ಬಾದಮಿಯಲ್ಲಿಯೂ ನಿಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ನಿಲ್ಲಲ್ಲ. ಅವರಿಗೆ ಅಲ್ಲಿ ನಿಂತರೆ ಸೋಲ್ತಿನಿ ಅಂತಾ ಗೊತ್ತು. ಅವರು ನಿಲ್ಲೋದೇ ಚಾಮರಾಜಪೇಟೆಯಲ್ಲಿ, ಜಮೀರ್ ಅಹಮದ್ ಹತ್ರಾನೆ. ಅಲ್ಲಿ ಮುಸಲ್ಮಾನರು ಅತಿ ಹೆಚ್ಚಿದ್ದಾರೆ. ಅಲ್ಲಿ ಓಟ್ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಗೆ ಕೇರಳಕ್ಕೆ ಹೋದರೋ ಹಾಗೇ ಇವರು ಚಾಮರಾಜಪೇಟೆಗೆ ಹೋಗ್ತಾರೆ. ನೋಡೊಣ ಅಲ್ಲಿ ಏನಾಗುತ್ತೆ ಅಂತಾ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *