ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸಾಗಿರುತ್ತದೆ. ಅಂತಹ ಕನಸನ್ನು ನಿರ್ದೇಶಕ ಅನೂಪ್ ಭಂಡಾರಿಗೆ 20 ವರ್ಷಗಳ ಹಿಂದಿಯೇ ಕಂಡಿದ್ದರಂತೆ. 20 ವರ್ಷಗಳ ನಂತರ ಅದೀಗ ಈಡೇರಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಆ ಕನಸು ಈಡೇರಿದೆ ಎಂದಿದ್ದಾರೆ ಅನೂಪ್. ಈ ಕುರಿತು ಅವರು ಮಾತನಾಡಿದ್ದಾರೆ.
“ವಿಕ್ರಾಂತ್ ರೋಣ ನನ್ನ ೨೦ ವರ್ಷದ ಕನಸು, ಸುದೀಪ್ ಸರ್ ಜೊತೆ ಕೆಲಸ ಮಾಡಲು. ೨೬ ವರ್ಷದ ಹಿಂದೆ ನಾನು ಸುದೀಪ್ ಸರ್‌ನ ಒಂದು ಫೋಟೋದಲ್ಲಿ ನೋಡಿದ್ದೆ. ನನ್ನ ತಂದೆ ಡ್ರಾಯರ್‌ನಲ್ಲಿ ಒಂದು ಫೋಟೋ ಇತ್ತು. ಅದರಲ್ಲಿದ್ದ ಯುವಕನಿಗೆ ಮೀಸೆ, ಗಡ್ಡ ಏನೂ ಇರಲಿಲ್ಲ, ನಾನು ಯಾರುದು ಎಂದು ನನ್ನ ತಂದೆಯನ್ನು ಕೇಳಿದಾಗ ಅವರು ಸುದೀಪ್ ನಮ್ಮದೊಂದು ಸೀರಿಯಲ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರು. ಇವರನ್ನು ಹಾಕೊಂಡು ಸಿನಿಮಾನೇ ಮಾಡಬಹುದಲ್ಲ ಇಷ್ಟು ಸ್ಮಾರ್ಟಾಗಿ ಇದ್ದಾರೆ ಅಂತ ಹೇಳಿದ್ದೆ ಅವತ್ತು. ನಮ್ಮ ತಂದೆಗೆ ಸಿನಿಮಾ ಮಾಡುವಂತಹ ಅವಕಾಶ ಬಂದಿಲ್ಲ, ಇವತ್ತು ನನಗೆ ಬಂದಿದೆ’ ಎಂದಿದ್ದಾರೆ ಅನೂಪ್. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ
ಇದೀಗ ಕಿಚ್ಚ ಮತ್ತು ಅನೂಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೂಪ್ ಕೆಲಸದ ಬಗ್ಗೆಯೇ ಅನೇಕರು ಮಾತನಾಡಿದ್ದಾರೆ. ಈ ತಿಂಗಳು ಕೊನೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್, “ಕನ್ನಡ ಚಿತ್ರರಂಗದ ಒಂದು ಭಾಗ ಆಗೋಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಕಪ್ ಹಾಕಿದಾಗ ಒಂದೇ ಆಸೆ ಇದ್ದಿದ್ದು, ಹೀರೋ ಆಗ್ಬೇಕು ಅಂತ. ಹೀರೋ ಆದ್ಮೇಲೆ ಆಸೆ ಇದ್ದಿದ್ದು ಒಂದು ಹೌಸ್‌ಫುಲ್ ಆಗ್ಬೇಕು ಅಂತ. ಇವತ್ತಿಗೂ ಅದಕ್ಕಿಂದ ಮೇಲೆ ನಾನು ಹೋಗೇ ಇಲ್ಲ. ನಾನು ಸಿನಿಮಾನ ಪ್ರೀತಿಸಿದ್ದೇನೆ, ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಸಿನಿಮಾ ಇವತ್ತಿಗೂ ಕೈ ಹಿಡಿದಿದೆ. ಚಿತ್ರರಂಗದ ಹಿರಿಯರು, ಸ್ನೇಹಿತರು ಇರಲಿಲ್ಲ ಎಂದರೆ ನಾನು ಕಲಾವಿದನಾಗಿ ಬೆಳೆಯುತ್ತಿರಲಿಲ್ಲ, ಸ್ನೇಹಿತನಾಗಿ ಬೆಳೆಯುತ್ತಿರಲಿಲ್ಲ. ಮನುಷ್ಯನಾಗಿ ಮುಂದೆ ಹೋಗುತ್ತಾ ಇರಲಿಲ್ಲ. ನಾವೇನಾದ್ರೂ ಮನೆಗೆ ವಾಪಸ್ ತೆಗೆದುಕೊಂಡು ಹೋಗೋದೆಂದ್ರೆ ಸ್ಟಾರ್ಡಮ್ ಅಲ್ಲ, ಕೇವಲ ಜನರ, ಅಭಿಮಾನಿಗಳ ಪ್ರೀತಿಯಷ್ಟೇ. ಅದಕ್ಕಿಂತ ಸುಂದರವಾದದ್ದು ಏನೂ ಇಲ್ಲ’ ಅನ್ನುತ್ತಾರೆ ಸುದೀಪ್.