ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್

Public TV
1 Min Read
JAMMU KASHMIR

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಸ್ಫೋಟಗಳ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ) ಸಂಘಟನೆಯ ಕೈವಾಡವಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಸರಣಿ ಸ್ಫೋಟಗಳ ಹಿಂದೆ ಪಾಕಿಸ್ತಾನ ಮೂಲದ ಎಲ್‍ಇಟಿ ಸಂಘಟನೆಯ ಕೈವಾಡವಿರುವುದು ಪೊಲೀಸರಿಗೆ ತಿಳಿದುಬಂದಿದೆ. ಈ ಹಿನ್ನೆಲೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿರುವಾಗಲೇ ಇಬ್ಬರನ್ನು ಬಂಧಿಸಿದ್ದು, ಪ್ರಸ್ತುತ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿ ಹಣಕ್ಕೆ ಕಿತ್ತಾಟ – 3ನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿಗಳು, ಓರ್ವ ಸಾವು

Pak-Primarily based Lashkar Behind Current Kashmir Explosions, 2 Arrested:  Police – Latest News, Breaking News Today – Bollywood, Cricket, Business,  Politics | Lokjanta

ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಮುಖೇಶ್ ಸಿಂಗ್ ಈ ಕುರಿತು ಮಾತನಾಡಿದ್ದು, ಬಂಧಿತ ಆರೋಪಿಗಳಿಂದ ಐದು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ) ಸೇರಿದಂತೆ, ಸ್ಫೋಟಕ ವಸ್ತುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಹುಡುಕುತ್ತಿದ್ದೇವೆ. ರಜೌರಿಯ ಲಾರ್ಕೋಟಿ, ಟರ್ಗೈನ್, ಜಗ್ಲಾನೂ ಮತ್ತು ದ್ರಾಸ್ ಪ್ರದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಅನೇಕ ದಾಳಿಗಳು ನಡೆದಿದೆ. ಇಲ್ಲಿ ದೊರೆತ ಮಾಹಿತಿಗಳ ಆಧಾರದ ಮೇಲೆ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೇವೆ. ಇಬ್ಬರು ಶಂಕಿತರಾದ ಮೊಹಮ್ಮದ್ ಶಬೀರ್ ಮತ್ತು ದ್ರಾಜ್‍ನ ಮೊಹಮ್ಮದ್ ಸಾದಿಕ್‍ನನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ಮಳೆ ಬಂದ್ರೆ ನೆಂದು ಹೋಗ್ತೇವೆ, ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ: ವಿದ್ಯಾರ್ಥಿಗಳ ಮನವಿ 

KILLING CRIME

ತನಿಖೆಯ ವೇಳೆ, ಮೂವರು ಆರೋಪಿಗಳಾದ ತಾಲಿಬ್ ಶಾ, ಬುಧಾಲ್ ಪ್ರದೇಶದ ದ್ರಾಜ್ ಗ್ರಾಮದ ಶಬೀರ್ ಮತ್ತು ಸಾದಿಕ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *