ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ

Public TV
1 Min Read
basavaraj horatti

ಹುಬ್ಬಳ್ಳಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಮಟ್ಟದ ಶಿಕ್ಷಕರ ಸಭೆ ಕರೆದಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿದ್ದೇನೆ. ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಕರ್ನಾಟಕ ಏಕೀಕರಣದಲ್ಲಿ ನಡೆದ ಹೋರಾಟ ನೆನಪಿಸಿಕೊಳ್ಳಲಿ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಡಿಜೆ ಹಳ್ಳಿಯ ದರ್ಗಾದಲ್ಲಿ ಬೆಂಕಿ ಅವಘಡ

BJP Flag Final 6

ಬಿಜೆಪಿಯಲ್ಲಿ ಯಾರು ಖಂಡಿಸುತ್ತಾರೋ, ಇಲ್ವೋ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಏಕೀಕರಣ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ. ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗ್ತಾನೆ ಅಂತ ಹೇಳಿದ್ದರು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರ್ಕಾರಕ್ಕೆ ಕೇಳೋಣ, ಅನ್ಯಾಯ ಸರಿಪಡಿಸಲು ಕೇಳೋಣ ಎಂದರು.

umesh katti 1

ಪಠ್ಯಪುಸ್ತಕ ಪೂರೈಕೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ಉಂಟಾಗಿ ವಿಳಂಬವಾಗಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ. ಪಠ್ಯ ವಿಚಾರದಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪಠ್ಯಪುಸ್ತಕ ಪರಿಷ್ಕರಣ ವಿಚಾರ ಸಮಿತಿಗೆ ಬಿಡಬೇಕು. ಅದರಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಭಾಗವಹಿಸುವುದು ಸರಿಯಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾನಿಯಾಗಬಾರದು. ಆ ದೃಷ್ಠಿಯಿಂದ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

Live Tv 

Share This Article
Leave a Comment

Leave a Reply

Your email address will not be published. Required fields are marked *