LatestMain PostNational

ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

Advertisements

ಪಾಟ್ನಾ: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಮುಂಗೇರ್‌ನಲ್ಲಿ ನಡೆದಿದೆ.

ಜೂನ್ 14ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಹಾಗೂ ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ನವದಂಪತಿ ಕುಟುಂಬಸ್ಥರ ಮನೆಗೆ ಭೇಟಿ ನೀಡುತ್ತಿದ್ದರು.

ಜೂನ್ 22ರಂದು ಸಂಜೆ ಮೋನಿ ಕುಮಾರಿ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಈ ವೇಳೆ ಕಾರ್‌ನಿಂದ ಬಂದ ನವದಂಪತಿಗೆ ಅಡ್ಡಹಾಕಿ ಪತಿ ವಿವೇಕ್‍ಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಮತ್ತೊಂದೆಡೆ ಮೋನಿ ಕುಮಾರಿಯನ್ನು ಕಾರ್ ಒಳಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ನಂತರ ಗಾಬರಿಗೊಂಡ ಪತಿ ವಿವೇಕ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

ಇದಾದ ಬಳಿಕ ಮನೆಗೆ ಬಂದು ನೋಡಿದರೆ, ಮನೆಯಲ್ಲಿದ್ದ ಒಡವೆ ಯಾವುದೇ ಕಾಣಲಿಲ್ಲ. ಅಲ್ಲದೇ ಮೋನಿಗೆ ಬೇಕಾದ ವಸ್ತುಗಳು ಕೂಡ ರೂಮ್‍ನಲ್ಲಿ ಇರಲಿಲ್ಲ. ಈ ಬಗ್ಗೆ ಅನುಮಾನಗೊಂಡ ವಿವೇಕ್ ಪೊಲೀಸರಿಗೆ ತಿಳಿಸಿದ್ದಾರೆ. ಮೋನಿ ಮೊಬೈಲ್ ಪರಿಶೀಲನೆ ನಡೆಸಿದ ವಿವೇಕ್‍ಗೆ ವ್ಯಕ್ತಿಯೋರ್ವ ಪದೇ, ಪದೇ ಕರೆ ಮಾಡಿರುವ ವಿಚಾರ ತಿಳಿದುಬಂದಿದೆ.

ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಮೋನಿ ಕುಮಾರಿ ಹಾಗೂ ಆಕೆಯ ಪ್ರಿಯಕರ ದಿವ್ಯಾಂಶು ಕುಮಾರ್ ಫೋನ್ ಟ್ರ್ಯಾಕ್ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೋನಿ ಕುಮಾರಿ ಹಾಗೂ ದಿವ್ಯಾಂಶು ಕುಮಾರ್ ಇಬ್ಬರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ನಿರಾಕರಿಸಿದ್ದರಿಂದ ಮದುವೆಯಾದ ಬಳಿಕ ಓಡಿ ಹೋಗಲು ಮೋನಿ ಕುಮಾರಿ ಪ್ಲ್ಯಾನ್ ಮಾಡಿದ್ದಾಳೆ.

ಜೂನ್ 22ರಂದು ಮೋನಿ ಕುಮಾರಿ ಪ್ರಿಯಕರ ದಿವ್ಯಾಂಶು ಕುಮಾರ್‌ಗೆ ತನ್ನನ್ನು ಕಿಡ್ನಾಪ್ ಮಾಡುವಂತೆ ತಿಳಿಸಿದ್ದಳು. ಅದರಂತೆ ದಿವ್ಯಾಂಶು ಕುಮಾರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಮೋನಿಯನ್ನು ಅಪಹರಿಸಿದ್ದಾನೆ. ಎಲ್ಲವೂ ಮೋನಿ ಪ್ಲ್ಯಾನ್ ಪ್ರಕಾರವೇ ಮಾಡಿರುವುದಾಗಿ ದಿವ್ಯಾಂಶು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಎಸ್‍ಎಚ್‍ಒ ಧೀರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.  ಇದನ್ನೂ ಓದಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

ಒಟ್ಟಾರೆ ಮದುವೆ ಬಗ್ಗೆ ಸಾಕಷ್ಟು ಆಸೆ ಕನಸು ಇಟ್ಟುಕೊಂಡಿದ್ದ ಪತಿ ವಿವೇಕ್‍ಗೆ ಹೆಂಡತಿಯ ಕಥೆ ಕೇಳಿ ದಿಕ್ಕು ದೋಚದಂತೆ ಆಗಿದೆ.

Live Tv

Leave a Reply

Your email address will not be published.

Back to top button