ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Public TV
1 Min Read
CCTV 2

ಹೈದರಾಬಾದ್: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಅಪ್ರಾಪ್ತ ಆರೋಪಿಗಳ ಫೋಟೋ ಮತ್ತು ವೀಡಿಯೋ ಬಿಡುಗಡೆ ಮಾಡಿದ್ದಕ್ಕಾಗಿ ಬಿಜೆಪಿ ಶಾಸಕ ರಘುನಂದನ್ ರಾವ್ ಅವರನ್ನು ಕಾಂಗ್ರೆಸ್ ಸಂಸದ ಮತ್ತು ತೆಲಂಗಾಣ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಅವರು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ

ರಘುನಂದನ್ ರಾವ್ ಟ್ವೀಟ್‍ನಲ್ಲಿ, ತೆಲಂಗಾಣದಲ್ಲಿ ಆಡಳಿತಾರೂಢ(ತೆಲಂಗಾಣ ರಾಷ್ಟ್ರ ಸಮಿತಿ) ಟಿಆರ್‌ಎಸ್ ಸರ್ಕಾರದ ಹಿರಿಯ ಸದಸ್ಯರ ಪುತ್ರನಾಗಿರುವ ಅಪ್ರಾಪ್ತ ಆರೋಪಿಗೆ ಪೊಲೀಸರು ತರಾತುರಿಯಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ. ಶಾಸಕರ ಪುತ್ರನ ಕೈವಾಡವನ್ನು ಸಾಬೀತುಪಡಿಸುವ ವೀಡಿಯೋ ಸಾಕ್ಷಿಗಳನ್ನು ನಾನು ಹೊಂದಿದ್ದೇನೆ ಎಂದು ಬರೆದು ಅಪ್ರಾಪ್ತನ ಫೋಟೋ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

ಈ ಟ್ವೀಟ್‍ಗೆ ಪ್ರತಿಕ್ರಿಯೆ ಕೊಟ್ಟ ಮಾಣಿಕಂ ಟ್ಯಾಗೋರ್ ಅವರು, ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂಐಎಂ ಶಾಸಕರ ಮಗ ಎಂದು ಹೇಳಲಾಗಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನೀವು ಸಂತ್ರಸ್ತೆ ಮತ್ತು ಅಪ್ರಾಪ್ತನ ಗುರುತನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಂಡಿದ್ದೀರಿ. ತೆಲಂಗಾಣದ ಮಗಳನ್ನು ಅವಮಾನಿಸಲು ನಾವು ಅನುಮತಿಸುವುದಿಲ್ಲ. ನಾವು ಮ್ಯಾಚ್ ಫಿಕ್ಸಿಂಗ್ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ 

car women rape

ನಡೆದಿದ್ದೇನು?
ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಶನಿವಾರ ಸಿಕ್ಕ ಸಿಸಿಟಿವಿಯಲ್ಲಿ, ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ಹೋಗಿದ್ದರು. ಈ ವೇಳೆ ಹುಡುಗರು ಆಕೆಯನ್ನು ಮನೆಗೆ ಬಿಡಲು ಮುಂದಾಗುತ್ತಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *