ಹೈದರಾಬಾದ್: ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಗುರುತಿಸಲಾದ ಐದು ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 28 ರಂದು ಹೈದರಾಬಾದ್‍ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಕುರಿತು ಅಪ್ರಾಪ್ತ ಬಾಲಕಿಯ ತಂದೆ ಪೆÇಲೀಸರಿಗೆ ದೂರು ನೀಡಿದ ನಂತರ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೊ ಕಾಯಿದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಈ ಕುರಿತು ಮಾಹಿತಿ ಕೊಟ್ಟಿದ್ದು, ಆರೋಪಿಗಳ ಬಗ್ಗೆ ಸಂತ್ರಸ್ತೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ ಆಕೆ ಒಬ್ಬನ ಹೆಸರನ್ನು ಮಾತ್ರ ತಿಳಿಸಿದ್ದಾಳೆ. ತಕ್ಷಣ ಅವನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಐದು ಆರೋಪಿಗಳ ಬಗ್ಗೆ ಪತ್ತೆ ಮಾಡಲಾಗಿದೆ. ಸಂತ್ರಸ್ತೆ ಪ್ರಸ್ತುತ ಯಾರನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು?
ಸಿಸಿಟಿವಿಯಲ್ಲಿ ಏನಿದೆ?
ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ನಿಂತಿರುವುದನ್ನು ಕಾಣಿಸುತ್ತೆ. ಈ ವೇಳೆ ಹುಡುಗರು ಸಂತ್ರಸ್ತೆಯನ್ನು ಮನೆಗೆ ಬಿಡಲು ಮುಂದಾಗಿದ್ದಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.